DAKSHINA KANNADA
*126 ಮಕ್ಕಳಿಂದ ಒಂದೇ ವೇದಿಕೆಯಲ್ಲಿ ಶತಸ್ಮರಣ-ಶತನಮನ-ಚೆಲ್ಡುವಾಲೆ ಭಜನಾ ಸಂಪನ್ನ*
ಮಂಗಳೂರು ರಥಬೀದಿ ಗುರುವಾರ ಇಳಿಸಂಜೆ ಅಕ್ಷರಶ: ಜನಸಾಗರಕ್ಕೆ ಸಾಕ್ಷಿಯಾಗಿತ್ತು. ಕಾಶೀಮಠದ ಹಿರಿಯ ಯತಿವರೇಣ್ಯರಾದ, ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಪ್ರಯುಕ್ತ 126 ಮಕ್ಕಳು ಒಂದೇ ವೇದಿಕೆಯಲ್ಲಿ ಏಕಕಂಠದಲ್ಲಿ 11 ವಿವಿಧ ಭಜನಾ ಹಾಡುಗಳನ್ನು ಹಾಡುವ ಮೂಲಕ ಸ್ವಾಮೀಜಿಯವರಿಗೆ ಭಜನಾ ಸೇವೆಯನ್ನು ಸಮರ್ಪಿಸಿದರು.ಪುಟ್ಟ ಚಿಣ್ಣರಿಂದ ಹಿಡಿದು ಎಂಟನೇ ತರಗತಿಯ ತನಕ ಮಕ್ಕಳು ಶತಸ್ಮರಣ – ಶತನಮನ- ಚೆಲ್ಡುವಾಲೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪರೂಪದ ವಿಶೇಷ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ […]


