HOME
STATE
*11 ತಿಂಗಳ ಮಗು ನೀರಿನ ಟಬ್ ಒಳಗೆ ಬಿದ್ದು ದುರಂತ ಅಂತ್ಯ*
ಬೆಂಗಳೂರು .ಅಕ್ಟೋಬರ್ 20: ನೀರಿನ ಟಬ್ ಒಳಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನಡೆದಿದೆ. ಶಂಷಾದ್ ಪಠಾಣ್ ಮತ್ತು ಮುಸ್ಕಾನ್ ದಂಪತಿಗಳ ನಾಲ್ಕನೇ ಪುತ್ರಿ ಖುಷಿ ಮೃತ ದುರ್ದೈವಿಯಾಗಿದ್ದು, ಪ್ರಪಂಚವನ್ನು ಸರಿಯಾಗಿ ನೋಡುವ ಮೊದಲೇ ಕಂದಮ್ಮ ಕಣ್ಮುಚ್ಚಿದೆ. ಮಗು ಆಟವಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದ ಪರಿಣಾಮ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮನೆ ಒರೆಸುವ ಸಲುವಾಗಿ ಟಬ್ಗೆ ನೀರನ್ನು ತುಂಬಿಸಿ ಇಡಲಾಗಿತ್ತು. […]


