ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ
ಮಂಗಳೂರು, ಸೆ. 11: ಬಹುತ್ವ ಬಹುಭಾಷೆ, ಬಹು ಸಂಸ್ಕೃತಿಯೊಂದಿಗೆ ಬೆಳದು ಬಂದಿರುವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಭಾಷೆಯ ಅಧಿಕಾರಶಾಹಿ ರಾಜಕಾರಣಿಗಳ ಒತ್ತಾಸೆಗೆ ಬಲಿಯಾಗದೆ, ಸಂವಿಧಾನದ ಪರವಾಗಿ ನಿಲ್ಲುವ ಮೂಲಕ ಸಹಬಾಳ್ವೆಯನ್ನು ಉಳಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಪ್ರೊ| ಪುರುಷೋತ್ತಮ ಬಿಳಿಮಲೆ ಹೇಳಿದರು. ಮಂಗಳೂರು ಸಂತ ಮದರ್‌ತೆರೇಸಾ ವಿಚಾರ ವೇದಿಕೆ ವತಿಯಿಂದ ಮದರ್ ತೆರೇಸಾ ಅವರ 28ನೇ ಸಂಸ್ಕರಣ ದಿನದ ಅಂಗವಾಗಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿ ರುವ ಸವಾಲುಗಳು’ ಎಂಬ ವಿಷಯದಲ್ಲಿ ಕುದ್ಮುಲ್ […]