Tag: ಶಕ್ತಿನಗರದಲ್ಲಿ ಚಿರತೆ ಆತಂಕ: ಶಾಸಕ ವೇದವ್ಯಾಸ ಕಾಮತ್ ಅರಣ್ಯಾಧಿಕಾರಿಗಳೊಂದಿಗೆ ತುರ್ತು ಸಭೆ*

DAKSHINA KANNADA HOME

*ಮಂಗಳೂರಿನ ಕದ್ರಿ, ಶಕ್ತಿನಗರದಲ್ಲಿ ಚಿರತೆ ಆತಂಕ: ಶಾಸಕ ವೇದವ್ಯಾಸ ಕಾಮತ್ ಅರಣ್ಯಾಧಿಕಾರಿಗಳೊಂದಿಗೆ ತುರ್ತು ಸಭೆ*

ಮಂಗಳೂರು: ನಗರದ ಕದ್ರಿ ಮತ್ತು ಶಕ್ತಿನಗರದ ವಸತಿ ಪ್ರದೇಶಗಳಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಶಾಸಕ ವೇದವ್ಯಾಸ ಕಾಮತ್ ಅವರು ಅರಣ್ಯಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರು ಸಮಗ್ರ ಮಾಹಿತಿ ಪಡೆದರು. ಬೋನು ಅಳವಡಿಕೆ: ಕದ್ರಿ ಕೈಬಟ್ಟಲ್ ಹಾಗೂ ಶಕ್ತಿನಗರದ ಕೋರ್ಡೆಲ್‌ ಪ್ರದೇಶದ ಸಿಸಿಟಿವಿಗಳಲ್ಲಿ ಚಿರತೆ ಸಂಚಾರ ಪತ್ತೆಯಾಗಿದ್ದು, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಬೋನುಗಳನ್ನು ಇರಿಸಿದೆ. […]