DAKSHINA KANNADA
ವಿಶ್ವ ರಕ್ತದಾನಿಗಳ ದಿನಾಚರಣೆ
ವಿಶ್ವ ರಕ್ತದಾನಿಗಳ ದಿನಾಚರಣೆ
ನಿರಂತರ ರಕ್ತದಾನದಿಂದ ಆರೋಗ್ಯಪೂರ್ಣ ಹೃದಯ
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ
ಮಂಗಳೂರು : ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಸಮಿತಿ ವತಿಯಿಂದ ಎಸ್ಡಿಎಂ ಪಿ.ಜಿ.ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಗರದ ಕೊಡಿಯಾಲ್ಬೈಲ್ನ ಎಸ್ಡಿಎಂ ಕಾನ್ಫರೆನ್ಸ್ ಹಾಲ್ನಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಮಾತನಾಡಿ ‘ ನಿರಂತರ ರಕ್ತದಾನ ಮಾಡುವ ರಕ್ತದಾನಿಗಳ ದೇಹದಲ್ಲಿ ಶುದ್ದ ರಕ್ತ ಉತ್ಪಾದನೆಯಾಗುತ್ತಲೇ ಇರುವ ಕಾರಣ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಇದರಿಂದ ಅವರ ಹೃದಯವೂ ಆರೋಗ್ಯ ಪೂರ್ಣವಾಗಿರುತ್ತದೆ. ತುರ್ತು ಸಂದರ್ಭ ಜೀವ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ […]