COMMUNITY NEWS
ಮೈಸೂರಿನ ಡೊರ್ನಹಳ್ಳಿ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ಎಂಟನೇ ದಿನದ ನೊವೇನಾ ಭಕ್ತಿ ಆಚರಣೆ
ಮೈಸೂರು, ಜೂನ್ 11: ಡೊರ್ನಹಳ್ಳಿಯ ಪ್ರಸಿದ್ಧ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಪೂರ್ವಭಾವಿ ನೊವೇನಾ ಪ್ರಾರ್ಥನೆಯ ಎಂಟನೇ ದಿನದ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಭಕ್ತಿ ಶ್ರದ್ಧೆಯಿಂದ ನೆರವೇರಿಸಲಾಯಿತು. ಈ ಪವಿತ್ರ ದಿವ್ಯ ಬಲಿಪೂಜೆಯ ನೇತೃತ್ವವನ್ನು ಹೆಚ್.ಡಿ. ಕೋಟೆಯ ಸಂತ ಮೇರಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಬರ್ನಾರ್ಡ್ ಪ್ರಕಾಶ್ ಬರ್ನಿಸ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಬೆಸಿಲಿಕಾದ ರೆಕ್ಟರ್ ವಂದನೀಯ ಫಾದರ್ ಡೇವಿಡ್ ಸಗಾಯರಾಜ್ ಮತ್ತು ಬೆಸಿಲಿಕಾದ ಅಡ್ಮಿನಿಸ್ಟ್ರೇಟರ್ ವಂದನೀಯ ಫಾದರ್ ಪ್ರವೀಣ್ ಪೆದ್ರು ಅವರು […]


