DAKSHINA KANNADA
ಮಂಗಳೂರು ಧರ್ಮ ಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್ಸ್ ಸಂಯೋಜಕರಾಗಿ ಫಾ. ನವೀನ್ ಪಿಂಟೊ ನೇಮಕ
ಮಂಗಳೂರು ಜೂನ್ 18 : ಮಂಗಳೂರು ಧರ್ಮ ಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್ಸ್ ನೂತನ ಸಂಯೋಜಕರಾಗಿ ಫಾ. ನವೀನ್ ಪಿಂಟೊ ಅವರನ್ನು ನೇಮಕ ಮಾಡಲಾಗಿದೆ. ಜೂನ್ 18 ರಿಂದ ಅನ್ವಯವಾಗುವಂತೆ ಈ ನೇಮಕಾತಿ ಆದೇಶವನ್ನು ಧರ್ಮ ಪ್ರಾಂತ್ಯ ಹೊರಡಿಸಿದೆ. ಫಾ. ನವೀನ್ ಪ್ರಸ್ತುತ ಕೊಡಿಯಾಲ್ ಬೈಲ್ ಬಿಷಪ್ಸ್ ಹೌಸ್ನಲ್ಲಿ 2023 ರಿಂದ ಜ್ಯುಡೀಶಿಯಲ್ ವಿಕಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2022 ರಿಂದ 2025 ರವರೆಗೆ ಜೆಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಆಡಳಿತಾಧಿಕಾರಿ ಆಗಿಯೂ ಸೇವೆ ಸಲ್ಲಿಸುತ್ತಿರುವ ಅವರು ಸೆಮಿನರಿಯಲ್ಲಿ […]