Tag: ಮಂಗಳೂರು

COMMUNITY NEWS HOME INETRNATIONAL LATEST NEWS

ಇಂದು ಪೋಪ್‌ ಅಂತ್ಯಕ್ರಿಯೆ: ನೇರಪ್ರಸಾರ ಎಲ್ಲಿ; ಸಂಪೂರ್ಣ ವಿವರ ಇಲ್ಲಿದೆ…

ರೋಮ್‌: ಐದು ದಿನಗಳ ಹಿಂದೆ (ಏ. 21)ರಂದು ನಿಧನರಾಗಿದ್ದ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಇಂದು ವ್ಯಾಟಿಕನ್ ಸಿಟಿಯಲ್ಲಿ ಜರುಗಲಿದೆ. ಪೋಪ್ ಅವರು ಬದುಕಿದ್ದಾಗ ತಮ್ಮ ಅಂತ್ಯಕ್ರಿಯೆಯನ್ನು ವ್ಯಾಟಿಕನ್ ಸಿಟಿಯ ಸೇಂಟ್ ಮರಿಯಾ ಮಗೊಯ್ರ್ ನ ಆವರಣದಲ್ಲಿ ನೆರವೇರಿಸಬೇಕು ಎಂದು ಕೋರಿದ್ದರಂತೆ. ಹಾಗಾಗಿ, ಅಂತಿಮ ಇಚ್ಛೆಯನ್ನು ಪೂರೈಸುವ ಸಲುವಾಗಿ ಸಂತ ಮರಿಯಾ ಮಗೊಯ್ರ್ ನಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಭಾರತೀಯ ಕಾಲಮಾನ ಇಂದು (ಏ. 26ರಂದು) ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾಗುವ ಅಂತಿಮ […]

COMMUNITY NEWS LATEST NEWS

ಮಂಗಳೂರು: MCC ಬ್ಯಾಂಕ್‌ನಿಂದ ಪೋಪ್ ಫ್ರಾನ್ಸಿಸ್‌ಗೆ ಗೌರವ ನಮನ

ಮಂಗಳೂರು: ಎಂ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಛೇರಿಯಲ್ಲಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ದಿನಾಂಕ ಏ.24 ರಂದು ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ನಡೆಯಿತು. ಶ್ರೀಮತಿ ಕ್ಯಾರೆನ್ ಕ್ರಾಸ್ತಾ ತಂಡದಿಂದ ಪ್ರಾರ್ಥನಾ ಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಫಾ. ಮುಲ್ಲರ್ಸ್ ಸಂಸ್ಥೆಯ ನಿಯೋಜಿತ ನೀರ್ದೇಶಕರಾದ ವಂದನೀಯ ಪೌಸ್ತಿನ್ ಲೋಬೊ ಹಾಜರಿದ್ದರು. ವಂ. ಪೌಸ್ತಿನ್ ಲೋಬೊ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಗೌರವ ಸಲ್ಲಿಸಿ ಅವರು ಹಲವಾರು ಸಂದರ್ಭಗಳಲ್ಲಿ ಪೋಪ್ ಆವರೊಂದಿಗಿನ […]

DAKSHINA KANNADA HOME LATEST NEWS

ಪೆಹಲ್ಗಾಮ್ ದುಷ್ಕೃತ್ಯ: ಬಿಷಪ್‌ ಖಂಡನೆ

ಮಂಗಳೂರು: ಭಾರತದ ಮುಕುಟಮಣಿ ಎನ್ನಿಸಿರುವ ಕಾಶ್ಮೀರದಲ್ಲಿ ಪ್ರವಾಸಕ್ಕಾಗಿ ತೆರಳಿದ್ದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ, ಯಾವುದೇ ತಪ್ಪೆಸಗದವರ ಮೇಲೆ ಏಕಾಏಕಿ ಗುಂಡಿಟ್ಟು ಕೊಂದಿರುವುದು ಮಾನವತೆಗೆ ಕಳಂಕ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ.ಪೀಟರ್‌ ಪಾವ್ಲ್‌ ಸಾಲ್ಡನ್ಹಾ ಅವರು ಖೇದ ವ್ಯಕ್ತಪಡಿಸಿದ್ದಾರೆ. ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್‌ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಮಂದಿಯ ತಲೆಗೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. […]

DAKSHINA KANNADA HOME LATEST NEWS

Big Breaking: ಕ್ರೈಸ್ತರ ಪರಮೋಚ್ಛ ಗುರು ಪೋಪ್‌ ಫ್ರಾನ್ಸಿಸ್‌ ನಿಧನ

ವ್ಯಾಟಿಕನ್ ಸಿಟಿ: ಕ್ರಿಶ್ಚಿಯನ್‌ ಜಾಗತಿಕ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಇಂದು (ಏ.21-ಸೋಮವಾರ) ಕೊನೆಯುಸಿರೆಳೆದಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಪೋಪ್‌ ಫ್ರಾನ್ಸಿಸ್‌ ನಿಧನರಾಗಿದ್ದಾರೆ ಎಂದು ವ್ಯಾಟಿಕನ್‌ ಸಿಟಿ ಮೂಲಗಳು ಖಚಿತಪಡಿಸಿವೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7:35 ಕ್ಕೆ ಫ್ರಾನ್ಸಿಸ್ ಇಹಲೋಕ ತ್ಯಜಿಸಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಪೋಪ್ ಫ್ರಾನ್ಸಿಸ್ […]

DAKSHINA KANNADA HOME LATEST NEWS

“ವಕ್ಫ್‌ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಪೊಲೀಸ್‌ ಜೀಪು ಬಳಸಿಲ್ಲ”

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನ ಅಡ್ಯಾರ್‌ನಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಯ ಕಾರನ್ನು ಬಳಸಿದ ಬಗ್ಗೆ ವಿಡಿಯೋ ಸಮೇತ  ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿತ್ತು. ಇದಕ್ಕೆ  ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಎಸಿಪಿ (ಸಂಚಾರ ಉಪ ವಿಭಾಗ)ಯವರು ಕಾರ್ರಕ್ರಮ ಮುಗಿದ ಬಳಿಕ ಮಂಗಳೂರು ಕಡೆಗೆ ತೆರಳುವ ಸಂಚಾರ […]

COMMUNITY NEWS DAKSHINA KANNADA HOME LATEST NEWS

ಈಸ್ಟರ್ ಹಬ್ಬದ ಸಂದೇಶ ನೀಡಿದ ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ

ಮಂಗಳೂರು: ಈಸ್ಟರ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ ಅವರು ಶುಭಾಶಯ ಕೋರಿ ಈಸ್ಟರ್‌ ಸಂದೇಶ ನೀಡಿದ್ದಾರೆ. ಆ ಸಂದೇಶ ಹೀಗಿದೆ. “ಈಸ್ಟರ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನರಾದ ಸಂತೋಷವನ್ನು ನಾವು ಆಚರಿಸುತ್ತೇವೆ. ಶಿಲುಬೆಯ ಮೇಲೆ ಅವರ ತ್ಯಾಗ ಮತ್ತು ಪುನರುತ್ಥಾನವು ನಮಗೆ ಆಶಾಕಿರಣವನ್ನು, ಕ್ಷಮೆಯನ್ನು ಮತ್ತು ದೇವರ ಶಾಶ್ವತ ಪ್ರೀತಿಯನ್ನು ತೋರಿಸುತ್ತದೆ. ಕ್ರಿಸ್ತರು ಮ್ರತ್ಯುಂಜಯರಾದ ಆಚರಣೆಯ ಈ ಪವಿತ್ರ ಈಸ್ಟರ್ ಹಬ್ಬದ ನಿಮಿತ್ತ ನಿಮ್ಮೆಲ್ಲರಿಗೂ […]

DAKSHINA KANNADA HOME LATEST NEWS

ವಿಶ್ವದಾದ್ಯಂತ ಇಂದು ಕ್ರೈಸ್ತರಿಗೆ ಗುಡ್‌ ಫ್ರೈಡೇ

ಮಂಗಳೂರು: ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗುಡ್‌ ಫ್ರೈಡೇ. ಈ ದಿನವನ್ನು ಪ್ರತಿವರ್ಷ ಈಸ್ಟರ್‌ ಭಾನುವಾರದ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಇದು ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ್ದರಿಂದ ಗುಡ್‌ ಫ್ರೈಡೇ ತನ್ನ ಹೆಸರಿನಲ್ಲಿ ಸಾಂಕೇತಿಕವಾಗಿ ಶುಭವನ್ನು ಸೂಚಿಸಿದರೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಇದು ದುಃಖದ ದಿನವಾಗಿದೆ. ಈ ದಿನ ಪ್ರೀತಿ, ಜ್ಞಾನ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ ಹಾಗೂ ಮಾನವ ಕುಲದ ಕಲ್ಯಾಣಕ್ಕಾಗಿ ತನ್ನನ್ನು ತಾನೇ ತ್ಯಾಗ ಮಾಡಿದ ಏಸು ಕ್ರಿಸ್ತರ ತ್ಯಾಗವನ್ನು ಸ್ಮರಿಸಲಾಗುತ್ತದೆ. ಕ್ರೈಸ್ತ ಸಮುದಾಯದವರು ಈ […]

HOME LATEST NEWS NATIONAL

ಇಂದು ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ…!

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭರ್ಜರಿ ಹೆಚ್ಚಳ ಆಗಿದೆ. ಒಂದೇ ದಿನಕ್ಕೆ ಗುರುವಾರ ಸಾವಿರ ರೂಪಾಯಿ ಮೇಲ್ಪಟ್ಟು ಏರಿಕೆ ಆಗಿತ್ತು, ಇದೀಗ ಗುಡ್‌ಫ್ರೈಡೆ ದಿನವೂ 250 ರೂ ಹೆಚ್ಚಳ ಆಗಿದೆ. ಇಂದಿನ ಬೆಲೆ ಎಷ್ಟಿದೆ? ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಗ್ರಾಂ ಒಂದಕ್ಕೆ ಬರೋಬ್ಬರಿ 25 ರೂಪಾಯಿ ಹೆಚ್ಚಳ ಆಗಿದೆ. ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,945 ರೂ ಇದ್ದು, 24 ಕ್ಯಾರೆಟ್ 1 ಗ್ರಾಂ ಬೆಲೆ 27 […]

DAKSHINA KANNADA HOME LATEST NEWS

ಕ್ರೈಸ್ತ ಸಮುದಾಯದ ಶಿಕ್ಷಕರಿಗೆ ಮಾಲ್ಯಮಾಪನದಿಂದ ವಿನಾಯಿತಿ

ಮಂಗಳೂರು: ಈ ವಾರದಲ್ಲಿ ಕ್ರೈಸ್ತ ಸಮುದಾಯದ ಈಸ್ಟರ್‌ ಹಬ್ಬ ಇರುವ ಕಾರಣ ದಕ್ಷಿಣ, ಕನ್ನಡ, ಉಡುಪಿ ಜಿಲ್ಲೆಯ ಕ್ರೈಸ್ತ ಶಿಕ್ಷಕರಿಗೆ ಏ.17, 18 ಹಾಗೂ ಏ.20 ರಂದು ಎಸ್ಸ್ಎಸ್‌ಎಲ್‌ಸಿ ಮೌಲ್ಯಮಾಪನದಿಂದ ವಿನಾಯಿತಿ ನೀಡಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಈ ಸಂಬಂಧ ಕಥೋಲಿಕ್‌ ಸಭಾ ಅಧ್ಯಕ್ಷ ಅಲ್ವಿನ್‌ ಡಿಸೋಜ ಹಾಗೂ ಮಾಜಿ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಮನವಿ ಮಾಡಿದ್ದರು.  

DAKSHINA KANNADA HOME LATEST NEWS

ಪುತ್ತೂರು ಜಾತ್ರೆ ಪ್ರಯುಕ್ತ-ಸಂಚಾರ ಮಾರ್ಗ ಬದಲಾವಣೆ

ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಎಪ್ರಿಲ್ 17 ರಂದು ಬ್ರಹ್ಮರಥೋತ್ಸವ ನಡೆಯಲಿರುವುದರಿಂದ ಎಪ್ರಿಲ್ 16 ಮತ್ತು 17 ರಂದು ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ. ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ […]

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678