COMMUNITY NEWS
ಬೊಂದೆಲ್ ಸಂತ ಲಾರೆನ್ಸ್ ಶಾಲೆಯಲ್ಲಿ ನವೀಕೃತ ಸಭಾಂಗಣ ಉದ್ಘಾಟನೆ: ‘ರೆಸೊನನ್ಸ್–2026’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ
ಮಂಗಳೂರು, ಜುಲೈ 30: ಬೊಂದೆಲ್ನ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವೀಕೃತ ಸಭಾಂಗಣದ ಉದ್ಘಾಟನೆ ಹಾಗೂ ‘ರೆಸೊನನ್ಸ್–2026’ ಸಾಂಸ್ಕೃತಿಕ ಹಬ್ಬಕ್ಕೆ ಅತ್ಯಂತ ಸಡಗರದಿಂದ ಚಾಲನೆ ನೀಡಲಾಯಿತು. ಕರ್ನಾಟಕದ ನಿವೃತ್ತ ಶಿಕ್ಷಣ ನಿರ್ದೇಶಕರಾದ ಡಾ. ಸಿಪ್ರಿಯಾನ್ ಮೊಂತೆರೊ ಅವರು ರಿಬ್ಬನ್ ಕತ್ತರಿಸುವ ಮೂಲಕ ನವೀಕೃತ ಸಭಾಂಗಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಇದೇ ವೇಳೆ ‘ರೆಸೊನನ್ಸ್–2026’ರ ಮುಖ್ಯ ಅತಿಥಿ, ಭರತನಾಟ್ಯ ಕಲಾವಿದೆ ಕುಮಾರಿ ರೆಮೋನಾ ಎವಿಯೆಟ್ ಪಿರೇರಾ ಅವರು ಬ್ಯಾನರ್ ಬಿಡುಗಡೆ ಮಾಡಿ ಸಾಂಸ್ಕೃತಿಕ ಹಬ್ಬಕ್ಕೆ ಭವ್ಯ ಚಾಲನೆ ನೀಡಿದರು. […]


