ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ: ಭಾರತದ ರಾಪ್ಟ್ರಪತಿ ಮುರ್ಮು ಭಾಗಿ
ರೋಮ್: ಐದು ದಿನಗಳ ಹಿಂದೆ (ಏ. 21)ರಂದು ನಿಧನರಾಗಿದ್ದ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಇಂದು ವ್ಯಾಟಿಕನ್ ಸಿಟಿಯಲ್ಲಿ ಜರುಗಲಿದೆ. ಈ ಅಂತ್ಯಕ್ರಿಯೆಗೆ ವಿಶ್ವದಿಂದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಭಾರತದ ಪ್ರತಿನಿಧಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈಗಾಗಲೇ ರೋಮ್ ತಲುಪಿದ್ದಾರೆ. ಶುಕ್ರವಾರ ನಡೆದ ಅಂತಿಮ ನಮನ ಕಾರ್ಯಕ್ರಮದಲ್ಲಿ ಶ್ರದ್ದಾಂಜಲಿ ಅರ್ಪಿಸಿದರು. ಇದೇ ವೇಳೆ ಮುಂಬೈನ ಈ ಹಿಂದಿನ ಆರ್ಚ್ ಬಿಷಪ್ ಓಸ್ವಾಲ್ಡ್ ಕಾರ್ಡಿನಲ್ ಗ್ರೇಶಿಯಸ್ ಸೇರಿ ಹಲವರು ಭಾಗವಹಿಸಿದ್ದರು.