Tag: ಕೆನರಾಟಿವಿ ನ್ಯೂಸ್‌

DAKSHINA KANNADA HOME LATEST NEWS

ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಪೋಸ್ಟ್‌: ಯತೀಶ್‌ ಪೆರುವಾಯಿ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಪೋಸ್ಟ್ ಹಂಚಿಕೊಂಡಿದ್ದ ಯುವಕನೋರ್ವನ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರುವಾಯಿ ಗ್ರಾಮದ ನಿವಾಸಿ ಯತೀಶ ಎಂಬಾತನು ʻʻಯತೀಶ್ ಪೆರುವಾಯಿʼʼ ಎಂಬ ಹೆಸರಿನ ಪೇಸ್ ಬುಕ್ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ 3 ಪೋಸ್ಟ್ ಗಳನ್ನು ಪ್ರಸಾರ ಮಾಡಿದ್ದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೋಸ್ಟ್ ಗಳಿಂದಾಗಿ ವಿಭಿನ್ನ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು […]

DAKSHINA KANNADA HOME LATEST NEWS

ತೀವ್ರ ಮಳೆ: ಇಂದು (ಮೇ.30) ಶಾಲೆಗಳಿಗೆ ರಜೆ

ಮಂಗಳೂರು: ಕಳೆದ 24 ತಾಸುಗಳಲ್ಲಿ ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದೆ. ಇದೇ ಹವಾಮಾನ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆ (ಮೇ. 30)ಇಂದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

DAKSHINA KANNADA HOME LATEST NEWS STATE

ಕರಾವಳಿ ಪೊಲೀಸ್‌ ಇಲಾಖೆಗೆ ಭರ್ಜರಿ ಸರ್ಜರಿ ಎಸ್ಪಿ ಹಾಗೂ ಪೊಲೀಸ್‌ ಕಮೀಷನರ್‌ ಎತ್ತಂಗಡಿ

ಮಂಗಳೂರು: ಕರಾವಳಿಯಲ್ಲಿ ನಡೆದ ಕೋಮುಹತ್ಯೆಯನ್ನು ಹತ್ತಿಕ್ಕುವಲ್ಲಿ ವಿಫಲವಾದ ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಸರ್ಜರಿ ಮಾಡಿದ್ದು, ಇದರ ಮೊದಲ ಭಾಗವಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯನ್ನು  ವರ್ಗಾವಣೆ ಮಾಡಲಾಗಿದೆ.  ನೂತನ ಪೊಲೀಸ್‌ ಆಯುಕ್ತರಾಗಿ ಸುಧೀರ್‌ ಕುಮಾರ್‌ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಎಸ್ಪಿ ಸ್ಥಾನಕ್ಕೆ ಹಾಲಿ ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್‌ ಕೆ ಅವರನ್ನು ನೇಮಿಸಲಾಗಿದೆ. 2010 ನೇ ಬ್ಯಾಚ್‌ನ ಐಪಿಎಸ್‌ […]

DAKSHINA KANNADA HOME LATEST NEWS

ಸುಹಾಸ್ ಶೆಟ್ಟಿ ನಿವಾಸಕ್ಕೆ ಮೇ 11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಭೇಟಿ

ಮಂಗಳೂರು: ಇತ್ತೀಚಿಗೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವ ಜೆ. ಪಿ. ನಡ್ಡಾ ಮೇ 11 ರಂದು ಭೇಟಿ ನೀಡಲಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಜೆ. ಪಿ. ನಡ್ಡಾ ಮೇ11 ಮತ್ತು 12 ರಂದು ಎರಡು ದಿನ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದ ವೇಳೆ ಸುಹಾಸ್ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಮೇ 11 ರಂದು ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೂ […]

COMMUNITY NEWS HOME INETRNATIONAL LATEST NEWS

ನೂತನ ಪೋಪ್‌ ಆಯ್ಕೆ: ವ್ಯಾಟಿಕನ್‌ ಚಿಮಣಿಯಿಂದ ಬಿಳಿ ಹೊಗೆ

ವ್ಯಾಟಿಕನ್ ಸಿಟಿ: ಪೋಪ್‌ ಫ್ರಾನ್ಸಿಸ್‌ ನಿಧನದಿಂದ ತೆರವಾದ ಪೋಪ್‌ ಸ್ಥಾನಕ್ಕೆ ಮತ್ತೋರ್ವರು ಆಯ್ಕೆಯಾಗಿದ್ದಾರೆ. ಇದರ ಸಂಕೇತವಾಗಿ ಕೆಲವೇ ಹೊತ್ತಿನ ಮುಂಚೆ ಚಿಮಣಿ ಮೂಲಕ ಬಿಳಿ ಹೊಗೆ ಹೊರ ಸೂಸಿದೆ. ಇಂದು ಬೆಳಗ್ಗೆ ಇಲ್ಲಿನ ಸಿಸ್ಟೈನ್ ಚಾಪೆಲ್‌ನ ಚರ್ಚ್ ಚಿಮಣಿಯಿಂದ ಕಪ್ಪು ಹೊಗೆ ಹೊರಬಂದಿತ್ತು. ಇದೀಗ ಮತ್ತೆ ನಡೆದ ಗೌಪ್ಯ ಮತದಾನದಲ್ಲಿ ನೂತನ ಪೋಪ್‌ ಆಯ್ಕೆಯಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ವಿಶ್ವದ ನಾನಾ ದೇಶಗಳನ್ನು ಪ್ರತಿನಿಧಿಸುವ 133 ಕಾರ್ಡಿನಲ್‌ಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡುತ್ತಾರೆ. ಪೋಪ್ ಆಗಿ […]

DAKSHINA KANNADA HOME LATEST NEWS

ವಿಟ್ಲ: ಫಾತಿಮಾ ಮಾತ ಸಮುದಾಯ ಭವನ ಉದ್ಘಾಟನೆ

ವಿಟ್ಲ:  ಎಲ್ಲರ ಸಹಕಾರ ಅನ್ಯೂನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣಗೊಂಡು ಇಂದು ಲೋಕಾರ್ಪಣೆಗೊಂಡಿದೆ. ಅಭಿವೃದ್ಧಿಯ ಸಂಕೇತವೇ ಈ ಒಂದು ಸಭಾಭವನ ಆಗಿದೆ. ನಮ್ಮೊಳಗಿನ‌ ಸಂಬಂದ ಇನ್ನಷ್ಟು ಗಟ್ಟಿಯಾಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ರವರು ಹೇಳಿದರು. ಅವರು ಮೇ.೫ರಂದು ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರುವಾಯಿ ಮುಚ್ಚಿರಪದವು ಫಾತಿಮ ಮಾತೆ ದೇವಾಲಯದ ಫಾತಿಮಾ ಮಾತಾ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರು ಮಾತನಾಡಿ ಇದೊಂದು […]

COMMUNITY NEWS HOME INETRNATIONAL LATEST NEWS

ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ: ಭಾರತದ ರಾಪ್ಟ್ರಪತಿ ಮುರ್ಮು ಭಾಗಿ

ರೋಮ್‌: ಐದು ದಿನಗಳ ಹಿಂದೆ (ಏ. 21)ರಂದು ನಿಧನರಾಗಿದ್ದ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಇಂದು ವ್ಯಾಟಿಕನ್ ಸಿಟಿಯಲ್ಲಿ ಜರುಗಲಿದೆ. ಈ ಅಂತ್ಯಕ್ರಿಯೆಗೆ ವಿಶ್ವದಿಂದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಭಾರತದ ಪ್ರತಿನಿಧಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈಗಾಗಲೇ ರೋಮ್‌ ತಲುಪಿದ್ದಾರೆ. ಶುಕ್ರವಾರ ನಡೆದ ಅಂತಿಮ ನಮನ ಕಾರ್ಯಕ್ರಮದಲ್ಲಿ ಶ್ರದ್ದಾಂಜಲಿ ಅರ್ಪಿಸಿದರು. ಇದೇ ವೇಳೆ ಮುಂಬೈನ ಈ ಹಿಂದಿನ ಆರ್ಚ್‌ ಬಿಷಪ್‌ ಓಸ್ವಾಲ್ಡ್‌ ಕಾರ್ಡಿನಲ್‌ ಗ್ರೇಶಿಯಸ್‌ ಸೇರಿ ಹಲವರು  ಭಾಗವಹಿಸಿದ್ದರು.

COMMUNITY NEWS HOME INETRNATIONAL LATEST NEWS

ಇಂದು ಪೋಪ್‌ ಅಂತ್ಯಕ್ರಿಯೆ: ನೇರಪ್ರಸಾರ ಎಲ್ಲಿ; ಸಂಪೂರ್ಣ ವಿವರ ಇಲ್ಲಿದೆ…

ರೋಮ್‌: ಐದು ದಿನಗಳ ಹಿಂದೆ (ಏ. 21)ರಂದು ನಿಧನರಾಗಿದ್ದ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಇಂದು ವ್ಯಾಟಿಕನ್ ಸಿಟಿಯಲ್ಲಿ ಜರುಗಲಿದೆ. ಪೋಪ್ ಅವರು ಬದುಕಿದ್ದಾಗ ತಮ್ಮ ಅಂತ್ಯಕ್ರಿಯೆಯನ್ನು ವ್ಯಾಟಿಕನ್ ಸಿಟಿಯ ಸೇಂಟ್ ಮರಿಯಾ ಮಗೊಯ್ರ್ ನ ಆವರಣದಲ್ಲಿ ನೆರವೇರಿಸಬೇಕು ಎಂದು ಕೋರಿದ್ದರಂತೆ. ಹಾಗಾಗಿ, ಅಂತಿಮ ಇಚ್ಛೆಯನ್ನು ಪೂರೈಸುವ ಸಲುವಾಗಿ ಸಂತ ಮರಿಯಾ ಮಗೊಯ್ರ್ ನಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಭಾರತೀಯ ಕಾಲಮಾನ ಇಂದು (ಏ. 26ರಂದು) ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾಗುವ ಅಂತಿಮ […]

COMMUNITY NEWS LATEST NEWS

ಮಂಗಳೂರು ಕ್ರೈಸ್ತರಿಂದ ಜಗದ್ಗುರು ಪೋಪ್ ಫ್ರಾನ್ಸಿಸ್‌ಗೆ ನುಡಿನಮನ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಕೆಥೋಲಿಕರ ಪರಮೋಚ್ಛ  ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆ ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ನಡೆಸಲಾಯಿತು. ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿ, ಪೋಪ್ ಫ್ರಾನ್ಸಿಸ್ ಅವರು ಜಗತ್ತಿಗೆ ಬೆಳಕಾಗಿದ್ದಾರೆ. ಮಕ್ಕಳು, ಯುವಕರು, ಬಡವರು, ದೀನರು ಮತ್ತು ವಲಸಿಗರಿಗೆ ಹತ್ತಿರವಾಗಿದ್ದರು. ಪೋಪ್ ಫ್ರಾನ್ಸಿಸ್ ನಮಗೆ ಸಹೋದರತ್ವವನ್ನು ಕಲಿಸಿದ್ದಾರೆ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, […]

COMMUNITY NEWS LATEST NEWS

ಪೆಹಲ್ಗಾಮ್‌ ದಾಳಿ ಖಂಡಿಸಿದ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ

ಮಂಗಳೂರು: ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮೃತರಿಗೆ ಸಂತಾಪ ಸೂಚಿಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕಥೊಲಿಕ್ ಸಭಾ ಕೂಡ ಜೊತೆಗಿರಲಿದೆ. ಭಾರತದ ಪ್ರತಿ ಜನರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದನೆ ದಾಳಿ ಕ್ರೂರ ಅಪರಾಧ. ಇದಕ್ಕೆ ಯಾವುದೇ […]