ವಿಶ್ವಶಾಂತಿಗಾಗಿ ಕ್ರೈಸ್ತರು ಮಾ.13ರಂದು ಉಪವಾಸ -ಪ್ರಾರ್ಥನೆ ಮಾಡಿ: ಮಂಗಳೂರು ಬಿಷಪ್ ಕರೆ
ಮಂಗಳೂರು: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಭಾರತದ ಬಿಷಪರ ಮಂಡಳಿ ಅಧ್ಯಕ್ಷ ಅ.ವಂ. ಫಿಲಿಫ್ ನೆರಿ ಕಾರ್ಡಿನಲ್ ಫೆರಾವೋ ಅವರು ಎಂದು ಕರೆ ನೀಡಿದ್ದು, ಅದರಂತೆ ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8 ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಜೊತೆಗೆ ಮಾರ್ಚ್ 8ರಿಂದ 14ರವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷವಾಗಿ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ […]








