Tag: ಕೆನರಾಟಿವಿನ್ಯೂಸ್‌

HOME LATEST NEWS NATIONAL

ಮಹಾತ್ಮ ಗಾಂಧಿಯವರ ಮರಿಮೊಮ್ಮಗಳು ನಿಧನ

ನವದೆಹಲಿ: ಮಹಾತ್ಮ ಗಾಂದಿಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ನೀಲಂಬೆನ್  ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು. ಅವರು ನವಸಾರಿ ಜಿಲ್ಲೆಯ ಅಲ್ಕಾ ಸೊಸೈಟಿಯಲ್ಲಿರುವ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಜನವರಿ 30, 2008 ರಂದು ಮಹಾತ್ಮ ಗಾಂಧಿಯವರ 60 ನೇ ಪುಣ್ಯತಿಥಿಯಂದು, ನೀಲಂಬೆನ್ ಪಾರಿಖ್ ಅವರು ಬಾಪು ಅವರ ಕೊನೆಯ ಚಿತಾಭಸ್ಮವನ್ನು ಗೌರವಯುತವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಅನುಯಾಯಿಗಳು […]

Breaking News DAKSHINA KANNADA HOME LATEST NEWS

ಉಪ್ಪಿನಂಗಡಿ: ಗುಡ್ಡೆಯಲ್ಲಿ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧ ಪತ್ತೆ..!

ಉಪ್ಪಿನಂಗಡಿ: ಹಿಂದೂ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧನೋರ್ವ ಗುಡ್ಡೆಯಲ್ಲಿ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಉಪ್ಪಿನಂಗಡಿಯ ಇಳಂತಿಲ ಸಮೀಪ ಹಿಂದೂ ಮಹಿಳೆಯೊಂದಿಗೆ ಓರ್ವ ವೃದ್ಧ ಇರುವುದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದ್ದಾರೆ. ವೃದ್ಧ ಅಲ್ಲೇ ಸಮೀಪದ ಕರ್ವೇಲ್‌ ನಿವಾಸಿಯಾಗಿದ್ದು, ವೃದ್ದ ಮತ್ತು ಮಹಿಳೆ ಜೊತೆಯಾಗಿದ್ದುದ್ದನ್ನು ಕಂಡು ಇಬ್ಬರನ್ನೂ ಸ್ಥಳೀಯರು ಬೆನ್ನಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.  

DAKSHINA KANNADA HOME LATEST NEWS

ಸುಳ್ಯ: ನಿಯಂತ್ರಣ ತಪ್ಪಿ ಮನೆ ಮಹಡಿ ಮೇಲೆ ಬಿದ್ದ ಕಾರು

ಸುಳ್ಯ: ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಮನೆ ಮಹಡಿಯ ಮೇಲೆ ಬಿದ್ದು ಮನೆ ಮತ್ತು ಕಾರು ಜಖಂಗೊಂಡ ಘಟನೆ ಭಾನುವಾರ ಸುಳ್ಯದಲ್ಲಿ ನಡೆದಿದೆ. ನಿತ್ಯಾನಂದ ಮುಂಡೋಡಿ ಎಂಬುವವರ ಕಾರನ್ನು ಅವರ ಸೊಸೆ ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು. ಚಿರೆಕಲ್‍ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್‍ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮೇಲೆ ಬಿದ್ದಿದೆ. […]

HOME LATEST NEWS UDUPI

ಕ್ರೈಸ್ತ ಯುವತಿಯ ಕಿಡ್ನಾಪ್‌ ಕೇಸ್: ಹೈಕೋರ್ಟ್‌ ಮೊರೆ ಹೋದ ಪೋಷಕರು

ಉಡುಪಿ: ಕ್ರೈಸ್ತ ಧರ್ಮದ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಇದರ ಮಧ್ಯೆ ಇವರಿಬ್ಬರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಘಟನೆ ವಿವರ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಂತೆ ತನ್ನ ಮಗಳು ಜಿನ ಮೆರಿಲ್ (19) ಎಂಬಾಕೆಯನ್ನು ಮುಹಮ್ಮದ್ ಅಕ್ರಮ್ ಎಂಬಾತ ಅಪಹರಿಸಿರುವುದಾಗಿ ಯುವತಿ ತಂದೆ ಗೋಡ್ವಿನ್ ದೇವದಾಸ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ […]