COMMUNITY NEWS
*ವಿಟ್ಲ ಶೋಕ ಮಾತಾ ಚರ್ಚ್ ಆವರಣದಲ್ಲಿ 17 ಅಡಿ ಎತ್ತರದ ಬೃಹತ್ ಶಿಲುಬೆ ಪ್ರತಿಷ್ಠಾಪನೆ ಹಾಗೂ ಗರಿಗಳ ಭಾನುವಾರ ಆಚರಣೆ*
ವಿಟ್ಲ: ಪ್ರಸಿದ್ಧ ಶೋಕ ಮಾತಾ ಇಗರ್ಜಿಯಲ್ಲಿ ಇಂದು ‘ಗರಿಗಳ ಭಾನುವಾರ’ವನ್ನು (Palm Sunday) ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಚರ್ಚ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 17 ಅಡಿ ಎತ್ತರದ ಬೃಹತ್ ಪವಿತ್ರ ಶಿಲುಬೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ. ಐವನ್ ಮೈಕಲ್ ರೋಡ್ರಿಗಸ್ ಅವರು ನೂತನ ಶಿಲುಬೆಯನ್ನು ಆಶೀರ್ವದಿಸಿ, ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಗರಿಗಳ ಭಾನುವಾರದ ಪ್ರಯುಕ್ತ ವಿಶೇಷ ಬಲಿಪೂಜೆಯನ್ನು ನೆರವೇರಿಸಿ, ಯೇಸು ಕ್ರಿಸ್ತರು ಜೆರುಸಲೇಂ ಪ್ರವೇಶಿಸಿದ ಸ್ಮರಣಾರ್ಥ ಸಂದೇಶ ನೀಡಿದರು. ಈ […]


