ನಿಮ್ಮ ಪರ ಪ್ರಚಾರಕ್ಕೆ ರೆಡಿ: ಶಾಸಕ ಅಶೋಕ್ ರೈಗೆ ಪೆರುವಾಯಿ BJP ಕಾರ್ಯಕರ್ತರ ಭರವಸೆ..!
ಪುತ್ತೂರು: ನಾವು ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ ಆದರೆ ನಮ್ಮ ರಸ್ತೆಯನ್ನು ಇದುವರೆಗೂ ಯಾರೂ ಅಭಿವೃದ್ದಿ ಮಾಡಿಲ್ಲ, ನೀವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೀರಿ, ಪಕ್ಷ ಬೇಧವಿಲ್ಲದೆ ಅನುದಾನವನ್ನು ನೀಡುತ್ತಿದ್ದೀರಿ, ನಮ್ಮ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ನಾವು ನಿಮ್ಮ ಪರ ಬಹಿರಂಗ ಪ್ರಚಾರ ಮಾಡಿಯೇ ಮಾಡುತ್ತೇವೆ ಎಂದು ಪೆರುವಾಯಿ ಗ್ರಾಮದ ಬಿಜೆಪಿ ಕಾರ್ಯಕರ್ತರ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ರೈ ನಿವಾಸಕ್ಕೆ ಬಂದು ಭರವಸೆ ನೀಡಿದ್ದಾರೆ. ಪೆರುವಾಯಿ ಗ್ರಾಮದ ಬದಿಮಾರ್ ಪ್ರದೇಶದಲ್ಲಿ ಅನೇಕ […]





