DAKSHINA KANNADA
ಟೈ ಎಲೈಟ್ ಗಾಗಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಮತ್ತು ದ ಇಂಡಸ್ ಎಂಟರ್ ಪ್ರೈಸಸ್ (ಟೈ ) ಶೈಕ್ಷಣಿಕ ಒಪ್ಪಂದ
ಮಂಗಳೂರು: ದ ಇಂಡಸ್ ಎಂಟರ್ ಪ್ರೈಸಸ್ (ಟೈ )ಮಂಗಳೂರು ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಜಂಟಿಯಾಗಿ ಟೈ ಎಲೈಟ್ ಕಾರ್ಯಕ್ರಮ ಸಂಯೋಜಿಸಲು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಶೈಕ್ಷಣಿಕ ಮತ್ತು ಉದ್ಯಮರಂಗದ ನಡುವಿನ ಅಂತರ ನಿವಾರಿಸುವ ಹಾಗೂ ಮಕ್ಕಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ. ಕೆನರಾ ಇಂಜಿನಿಯರಿಂಗ್ ಕಾಲೇಜು ಸಹಿತ ಕೆನರಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿ, ನಾಯಕತ್ವ, ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂಬಂತೆ ಕಳೆದ ಶುಕ್ರವಾರ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. […]


