Tag: ಕೆನರಾಟಿವಿನ್ಯೂಸ್‌

DAKSHINA KANNADA HOME LATEST NEWS

ಮಂಗಳೂರು: ಅಡಿಕೆ ವ್ಯಾಪಾರಿಯಿಂದ 29 ಲಕ್ಷ ರೂ. ವಂಚನೆ

ಮಂಗಳೂರು: ಅಡಿಕೆ ವ್ಯಾಪಾರಿಯೊಬ್ಬ ಸಹಕಾರಿ ಸಂಘವೊಂದಕ್ಕೆ 29 ಲಕ್ಷ ರೂ. ಮೋಸ ಮಾಡಿದ ಬಗ್ಗೆ ಮಂಗಳೂರು ನಗರ ಹೊರವಲಯದ ಪಣಂಬೂರು  ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಬೈಕಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ಸಂಸ್ಥೆಯು ಮಂಗಳೂರು ಮತ್ತು ಇತರ ಕಡೆಗಳಲ್ಲಿ ಅಡಿಕೆ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುತ್ತಿದೆ. ಆರೋಪಿ ಸತ್ಯನಾರಾಯಣ ರಾಮಚಂದ್ರ ಭಟ್‌ (55) ಎಂಬಾತ ಗುಜರಾತ್‌ನ ಅಹಮದಾಬಾದ್ ನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, 2009ರಲ್ಲಿ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘದಿಂದ ಆರೋಪಿಯು […]

DAKSHINA KANNADA HOME LATEST NEWS

ಎ.5 ರಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದ.ಕ ಜಿಲ್ಲಾ ಪ್ರವಾಸ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಪ್ರಿಲ್ 5 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಎಪ್ರಿಲ್ 5 ರಂದು ಬೆಳಿಗ್ಗೆ 6:55 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ಆಗಮನ, ಬೆಳಿಗ್ಗೆ 7:40 ಗಂಟೆಗೆ ಸಕ್ರ್ಯೂಟ್ ಹೌಸ್, 9:30- ನಗರದ ಕೊಡಿಯಾಲ್‍ಬೈಲ್ ಜೈಲ್ ರಸ್ತೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಮತ್ತು ಪಶುರೋಗ ತಪಾಸಣೆ ಮತ್ತು ಮಾಹಿತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ, 10 – ದಕ್ಷಿಣ ಕನ್ನಡ […]

HOME LATEST NEWS UDUPI

ಕ್ರಿಶ್ಚಿಯನ್ ಯುವತಿ & ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಬಜರಂಗದಳ ಎಂಟ್ರಿ

ಮಂಗಳೂರು: ಉಡುಪಿಯಲ್ಲಿ ನಡೆದ ಕ್ರಿಶ್ಚಿಯನ್ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಇದೀಗ ಹಿಂದೂ ಸಂಘಟನೆಗಳು ಎಂಟ್ರಿ ನೀಡಿವೆ. ಈ ಹೋರಾಟಕ್ಕೆ ಧುಮುಕಿದ ಬಜರಂಗದಳ ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಭಜರಂಗದಳದ ಮುಖಂಡ ಸುನಿಲ್ ಕೆ ಆರ್ ಅವರು ಪ್ರತಿಕ್ರಿಯೆ ನೀಡಿ, ವಿಶ್ವ ಹಿಂದೂ ಪರಿಷತ್ ಲವ್ ಜಿಹಾದ್ ಬಗ್ಗೆ ಜಾಗೃತಿ ಕೆಲಸ ಮಾಡುತ್ತಿದೆ.  ಆದರೆ ಜಿಹಾದಿಗಳು ತಮ್ಮ ಕೃತ್ಯ […]

DAKSHINA KANNADA HOME LATEST NEWS

ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕರಿಮಣಿ ಎಗರಿಸಿ ಪರಾರಿ: ಗಂಭೀರ ಗಾಯ

ಮಂಗಳೂರು: ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ 70 ವರ್ಷದ ವೃದ್ಧೆಯನ್ನು ದೂಡಿಹಾಕಿ ಕರಿಮಣಿ ಸರವನ್ನು ಎಗರಿಸಿದ ಘಟನೆ ಮೂಡಬಿದ್ರೆಯ ಗುಜ್ಜರಗುಂಡಿ ಬಳಿ ಮಾ.31 ರಂದು ನಡೆದಿದೆ. ಘಟನೆಯಲ್ಲಿ ವೃದ್ದೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ವಿವರ ಇಂದಿರಾ (70) ಎಂಬುವರು ದಿನಾಂಕ 31-03-2025 ರಂದು ಕೋರಂತಬೆಟ್ಟು ಎಂಬಲ್ಲಿ ತನ್ನ ಅಳಿಯ ಭಾಸ್ಕರ ಎಂಬುವರ ಮನೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿ ಊಟ ಮುಗಿಸಿ ವಾಪಾಸ್ ಮನೆ ಕಡೆಗೆ ಬೆಳುವಾಯಿ – ಕರಿಯನಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಗುಜ್ಜರಗುಂಡಿ ಎಂಬಲ್ಲಿಗೆ […]

DAKSHINA KANNADA HOME LATEST NEWS UDUPI

ನಾಳೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಭಾರೀ ಮಳೆ ಸಾಧ್ಯತೆ..!

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ  ಸೇರಿದಂತೆ ರಾಜ್ಯದ ವಿವಿಧೆಡೆ ನಾಳೆ (ಗುರುವಾರ) ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ 30 ಕಿ.ಮೀ ನಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್ ಮತ್ತು ಗದಗ ಜಿಲ್ಲೆಯಲ್ಲಿ ಗಂಟೆಗೆ 50 […]

HOME LATEST NEWS STATE

Uber, Rapido ಸೇರಿದಂತೆ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್‌ ಆದೇಶ

ಬೆಂಗಳೂರು: ಉಬರ್, ರ್ಯಾಪಿಡೋ ಸಹಿತ ಹಲವು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸಿಲ್ಲ. ನಿಯಮಗಳಿಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ. ಹೀಗಾಗಿ ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸುವಂತೆ ಓಲಾ, ಉಬರ್ ಮತ್ತು ರ್ಯಾಪಿಡೊಗಳಿಗೆ ಆರು ವಾರಗಳ ಕಾಲಾವಕಾಶ ನೀಡಿ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದ್ದು, 3 ತಿಂಗಳಿನಲ್ಲಿ ನಿಯಮ ರೂಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಮೋಟಾರ್ ಸೈಕಲ್‌ಗಳನ್ನು […]

DAKSHINA KANNADA HOME LATEST NEWS

ಮಂಗಳೂರು: ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ-40 ಲೀ.ನಷ್ಟು ಬೆಲ್ಲದ ಕೊಳೆ ಪತ್ತೆ

ಮಂಗಳೂರು: ಆಡಂಕುದ್ರುನಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಉರ್ಬನ್‌ ಡಿಸೋಜಾ ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ 5 ಲೀಟರ್‌ ಕಳ್ಳಭಟ್ಟಿ ಸಾರಾಯಿ, ಕಳ್ಳಭಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಸಲಕರಣೆಗಳು, 40 ಲೀ.ನಷ್ಟು ಬೆಲ್ಲದ ಕೊಳೆ ಪತ್ತೆಯಾಗಿದೆ. ಮಂಗಳೂರು ದಕ್ಷಿಣ ವಲಯದ ಅಬಕಾರಿ ಕಮಲ ಎಚ್‌. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕ ಹರೀಶ್‌ ಪಿ. ಕಾನ್ಸ್ಟೇಬಲ್‌ಗಳಾದ ಬಸವಾರಜ ತೊರೆ, ಆನಂದ್‌, ವಾಹನಚಾಲಕ ರಘುರಾಮ ಕಾರ್ಯಚರಣೆಯಲ್ಲಿ ಸಹಕರಿಸಿದ್ದರು.

HOME LATEST NEWS NATIONAL

ಮಹಾತ್ಮ ಗಾಂಧಿಯವರ ಮರಿಮೊಮ್ಮಗಳು ನಿಧನ

ನವದೆಹಲಿ: ಮಹಾತ್ಮ ಗಾಂದಿಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ನೀಲಂಬೆನ್  ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು. ಅವರು ನವಸಾರಿ ಜಿಲ್ಲೆಯ ಅಲ್ಕಾ ಸೊಸೈಟಿಯಲ್ಲಿರುವ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಜನವರಿ 30, 2008 ರಂದು ಮಹಾತ್ಮ ಗಾಂಧಿಯವರ 60 ನೇ ಪುಣ್ಯತಿಥಿಯಂದು, ನೀಲಂಬೆನ್ ಪಾರಿಖ್ ಅವರು ಬಾಪು ಅವರ ಕೊನೆಯ ಚಿತಾಭಸ್ಮವನ್ನು ಗೌರವಯುತವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಅನುಯಾಯಿಗಳು […]

Breaking News DAKSHINA KANNADA HOME LATEST NEWS

ಉಪ್ಪಿನಂಗಡಿ: ಗುಡ್ಡೆಯಲ್ಲಿ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧ ಪತ್ತೆ..!

ಉಪ್ಪಿನಂಗಡಿ: ಹಿಂದೂ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧನೋರ್ವ ಗುಡ್ಡೆಯಲ್ಲಿ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಉಪ್ಪಿನಂಗಡಿಯ ಇಳಂತಿಲ ಸಮೀಪ ಹಿಂದೂ ಮಹಿಳೆಯೊಂದಿಗೆ ಓರ್ವ ವೃದ್ಧ ಇರುವುದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದ್ದಾರೆ. ವೃದ್ಧ ಅಲ್ಲೇ ಸಮೀಪದ ಕರ್ವೇಲ್‌ ನಿವಾಸಿಯಾಗಿದ್ದು, ವೃದ್ದ ಮತ್ತು ಮಹಿಳೆ ಜೊತೆಯಾಗಿದ್ದುದ್ದನ್ನು ಕಂಡು ಇಬ್ಬರನ್ನೂ ಸ್ಥಳೀಯರು ಬೆನ್ನಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.  

DAKSHINA KANNADA HOME LATEST NEWS

ಸುಳ್ಯ: ನಿಯಂತ್ರಣ ತಪ್ಪಿ ಮನೆ ಮಹಡಿ ಮೇಲೆ ಬಿದ್ದ ಕಾರು

ಸುಳ್ಯ: ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಮನೆ ಮಹಡಿಯ ಮೇಲೆ ಬಿದ್ದು ಮನೆ ಮತ್ತು ಕಾರು ಜಖಂಗೊಂಡ ಘಟನೆ ಭಾನುವಾರ ಸುಳ್ಯದಲ್ಲಿ ನಡೆದಿದೆ. ನಿತ್ಯಾನಂದ ಮುಂಡೋಡಿ ಎಂಬುವವರ ಕಾರನ್ನು ಅವರ ಸೊಸೆ ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು. ಚಿರೆಕಲ್‍ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್‍ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮೇಲೆ ಬಿದ್ದಿದೆ. […]