ಸುಳ್ಯ .ಅ.: 15 ರಂದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ – “ವಾಗ್ವಿಲಾಸ 2025” ನಡೆಸಲಾಯಿತು. ಈ ಸ್ಪರ್ಧೆಯ ಉದ್ಘಾಟನೆಯನ್ನು ಕಾಲೇಜಿನ ಪ್ರಾಶುಪಾಲರು ಡಾ. ಲೀಲಾಧರ್ ಡಿ ವಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸುತ್ತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ ವಿನಯ್ ಶಂಕರ್ ಭಾರಧ್ವಾಜ್, ಕಾರ್ಯಕ್ರಮದ ಸಂಯೋಜನಾಧಿಕರಾದ ಡಾ. ಹರ್ಷಿತಾ ಎಂ, ಸಾಹಿತ್ಯಿಕ ಸಮಿತಿಯ ಸದಸ್ಯರು, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ವಿಧ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು. ತನುಷಾ ಎ., ಹಾಗೂ ತೇಜಸ್ ಟಿ. ಆರ್. ನಿರೂಪಿಸಿ,
ಕು. ಅಮೂಲ್ಯ ಸಿ. ಸ್ವಾಗತಿಸಿ, ಕು. ಚಿನ್ಮಯೀ ಹಾಗೂ ಕು. ಮೌಲ್ಯ ಪ್ರಾರ್ಥಿಸಿದರು.