ಮಂಗಳೂರು: ನಗರದ ಪಾದುವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರತಿಭಾ ದಿನ ಸಂತ ಸೆಬಾಸ್ಟಿಯನ್ ಹಾಲ್ ಬೆಂದೂರ್ ನಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ .ಫಾ.ವಾಲ್ಟರ್ ಡಿಸೋಜಾ ಮಾತನಾಡಿ, ನಾಯಕತ್ವವು ಕೇವಲ ಸ್ಥಾನ ಅಥವಾ ಬಿರುದುಗಲಾಗಿರದೆ, ಅದು ಇತರರಲ್ಲಿ ಉತ್ತಮವಾದ ಗುಣ ಮತ್ತು ಪ್ರತಿಭೆಗಳನ್ನು ಹೊರತರುವ ಅವಕಾಶ ಎಂದು ಹೇಳಿದರು.

ಮುಖ್ಯ ಅತಿಥಿಯಾದ ಲೆಸ್ಲಿ ನೋಯೆಲ್ ರೇಗೊ ಮಾತನಾಡಿ, ಕಾಲೇಜು ಜೀವನವೆಂದರೆ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶ. ವಿದ್ಯಾರ್ಥಿಗಳು ಯಶಸ್ಸಿನ ಕನಸನ್ನು ಕಾಣಬೇಕು ಎಂದು ನುಡಿದರು. ಪ್ರೊ. ಶುಷ್ಮಿತಾ ಎಸ್. ಕೋಟ್ಯಾನ್ ಮಾತನಾಡಿ, ವಿದ್ಯಾಭ್ಯಾಸವೆಂದರೆ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ ಬದಲು ಜೀವನ ಶೈಲಿಯಾಗಿದೆ. ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ಬೆಳೆಸಬೇಕೆಂದು ಪ್ರಚೋದಿಸಿದರು.






ವೇದಿಕೆಯಲ್ಲಿ ಪ್ರಾಂಶುಪಾಲರಾದ ರೆ| ಅರುಣ್ ವಿಲ್ಸನ್ ಲೋಬೋ, ಪ್ರೊ. ವಿನೋದ್ ಡಿ’ಸೋಜ, ಪ್ಯಾಟ್ಸಿ ಬ್ರಿಟ್ಟೋ, ಕನ್ನಡ ಭಾಷೆ ಉಪನ್ಯಾಸಕರಾದ ಪ್ರವೀಣ್ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು.

ವಾಣಿಜ್ಯ ಉಪನ್ಯಾಸಕರಾದ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಉಪನ್ಯಾಸಕಿ ಕಾವೇರಿ ಟಿ.ಬಿ. ವಂದಿಸಿದರು. ಉಪನ್ಯಾಸಕಿ ಲೊರೆಟ್ಟಾ ಆಂತೋನಿ ಕಾರ್ಯಕ್ರಮವನ್ನು ನಿರೂಪಿಸಿದರು.