ಮಹಾನಗರ, ಆ.8: ಬೊಂದೇಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರ ಹಾಗೂ ಇಗರ್ಜಿಯಲ್ಲಿ ಆ. 10ರಂದು ವಾರ್ಷಿಕ ಮಹೋತ್ಸವ ಆಚರಣೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಡಾ। ಪೀಟರ್ ಪಾವ್ಲ್ ಸಲ್ಡಾನ್ಹಾ ಬಲಿಪೂಜೆ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ವಿಶ್ರಾಂತ ಬಿಷಪ್ ವಂ।ಡಾ। ಅಲೋಶಿಯಸ್ ಪಾವ್ಲ್ ಡಿ’ಸೋಜಾ ಬಲಿಪೂಜೆ ನೆರವೇರಿಸುವರು. ನೊವೆನಾ ಪ್ರಾರ್ಥನೆಗಳು ನಡೆಯುತ್ತಿದ್ದು, ಆ. 9ರಂದು ನೊವೆನಾದ ಕೊನೆ ದಿನವಾಗಿದೆ. ಬೆಳಗ್ಗೆ 10.30ಕ್ಕೆ ಮತ್ತು ಸಂಜೆ 5.30ಕ್ಕೆ ನೊವೆನಾ ಬಲಿಪೂಜೆಗಳು ನಡೆಯಲಿವೆ.
