canaratvnews

ಬೊಲ್ಕಿನಡ್ಕದ ಶೇರ್ಲಿನ್ ಡಿಸೋಜ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಪೆರ್ಲ : ನೀಲೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಮೇಳದಲ್ಲಿ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಶೇಣಿ ಬೊಲ್ಕನಡ್ಕದ ಶೇರ್ಲಿನ್ ಡಿಸೋಜ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಗಲ್ಫ್ ಉದ್ಯೋಗಿ ಬೊಲ್ಕನಡ್ಕದ ಸುರೇಶ ಅಗೋಸ್ಟರ್ ಮತ್ತು ಮೋನಿಕಾ ಮಚಾದೋ ದಂಪತಿಯ ಪುತ್ರಿಯಾದ ಈಕೆ ಬೇಳಾದ ಸೈಂಟ್ ಬಾರ್ತಲೋಮಿಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ. ಈಕೆಯ ಸಾಧನೆಯನ್ನು ಶಾಲಾ ಅಡಳಿತ ಮಂಡಳಿ ಹಾಗೂ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ಕೆಥೋಲಿಕ್ ಸಭಾ ಘಟಕವು ಅಭಿನಂದಿಸಿದೆ.

Share News
Exit mobile version