• Home  
  • *ಪೆರುವಾಯಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆಯ ವಲಯ ಮಟ್ಟದ ಆರಾಧನೆ ಮತ್ತು ಸಭೆ*
- DAKSHINA KANNADA

*ಪೆರುವಾಯಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆಯ ವಲಯ ಮಟ್ಟದ ಆರಾಧನೆ ಮತ್ತು ಸಭೆ*

ವಿಟ್ಲ: ಫಾತಿಮಾ ಮಾತೆಯ ದೇವಾಲಯದ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆ ಪೆರುವಾಯಿ ಹಾಗೂ ಸೈಂಟ್ ಜೋನ್ ಪಾವ್ಲ್ ದ್ವಿತೀಯ ವಲಯದ ಪ್ರಾದೇಶಿಕ ಸಮಿತಿ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ವಲಯ ಮಟ್ಟದ ಸಂಘಟನಾ ಸಭೆಯು ಇತ್ತೀಚೆಗೆ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಪೆರುವಾಯಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ. ಫಾ. ಸೈಮನ್ ಡಿ’ಸೋಜ ಹಾಗೂ ಸಾಲೆತ್ತೂರು ಚರ್ಚ್‌ನ ಧರ್ಮಗುರುಗಳಾದ ವಂ. ಫಾ. ಮನೋಜ್ ಪುಡ್ತಾ ದೊ ಅವರ […]

Share News

ವಿಟ್ಲ: ಫಾತಿಮಾ ಮಾತೆಯ ದೇವಾಲಯದ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆ ಪೆರುವಾಯಿ ಹಾಗೂ ಸೈಂಟ್ ಜೋನ್ ಪಾವ್ಲ್ ದ್ವಿತೀಯ ವಲಯದ ಪ್ರಾದೇಶಿಕ ಸಮಿತಿ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ವಲಯ ಮಟ್ಟದ ಸಂಘಟನಾ ಸಭೆಯು ಇತ್ತೀಚೆಗೆ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಪೆರುವಾಯಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ. ಫಾ. ಸೈಮನ್ ಡಿ’ಸೋಜ ಹಾಗೂ ಸಾಲೆತ್ತೂರು ಚರ್ಚ್‌ನ ಧರ್ಮಗುರುಗಳಾದ ವಂ. ಫಾ. ಮನೋಜ್ ಪುಡ್ತಾ ದೊ ಅವರ ನೇತೃತ್ವದಲ್ಲಿ ಪರಮ ಪ್ರಸಾದ ಆರಾಧನೆ ಜರುಗಿತು.

ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಸಮಾಜ ಸೇವೆ ಮತ್ತು ದೀನದಲಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ದೈವಿಕ ಶಕ್ತಿಯನ್ನು ಪ್ರಾರ್ಥಿಸಿದರು.
ಆರಾಧನೆಯ ನಂತರ ನಡೆದ ವಲಯ ಮಟ್ಟದ ಸಭೆಯಲ್ಲಿ ಸಂಘಟನೆಯ ಮುಂದಿನ ಯೋಜನೆಗಳ ಬಗ್ಗೆ ಹಾಗೂ ಬಡವರ ಸೇವೆಗೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ವಲಯದ ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿ ಆಧ್ಯಾತ್ಮಿಕ ನಿರ್ದೇಶಕ ಫಾ. ಮನೋಜ್ ಪುಡ್ತಾ ದೊ, ಪೆರುವಾಯಿ ಚರ್ಚ್‌ನ ಧರ್ಮಗುರು ಫಾ. ಸೈಮನ್ ಡಿ’ಸೋಜ, ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಎವರೆಸ್ಟ್ ಮೊಂತೆರೋ, ಕಾರ್ಯದರ್ಶಿ ಸಿಪ್ರಿಯನ್ ಲೋಬೋ, ಕೋಶಾಧಿಕಾರಿ ಸಿರಿಲ್ ಫೆರಾವೊ ಪೆರುವಾಯಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನಿಸ್ ಮೊಂತೆರೋ ಉಪಸ್ಥಿತರಿದ್ದರು.


ಪೆರುವಾಯಿ ಘಟಕದ ಅಧ್ಯಕ್ಷ ವಿಲಿಯಂ ಎಂ.ಸ್ವಾಗತಿಸಿದರು. ಉಪಾಧ್ಯಕ್ಷೆ ಸವಿತಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ವಲಯ ಕಾರ್ಯದರ್ಶಿ ಸಿಪ್ರಿಯನ್ ಲೋಬೋ ವಂದಿಸಿದರು.


Share News