• Home  
  • ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ
- DAKSHINA KANNADA - HOME

ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಮಂಗಳೂರು, ಸೆ. 11: ಬಹುತ್ವ ಬಹುಭಾಷೆ, ಬಹು ಸಂಸ್ಕೃತಿಯೊಂದಿಗೆ ಬೆಳದು ಬಂದಿರುವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಭಾಷೆಯ ಅಧಿಕಾರಶಾಹಿ ರಾಜಕಾರಣಿಗಳ ಒತ್ತಾಸೆಗೆ ಬಲಿಯಾಗದೆ, ಸಂವಿಧಾನದ ಪರವಾಗಿ ನಿಲ್ಲುವ ಮೂಲಕ ಸಹಬಾಳ್ವೆಯನ್ನು ಉಳಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಪ್ರೊ| ಪುರುಷೋತ್ತಮ ಬಿಳಿಮಲೆ ಹೇಳಿದರು. ಮಂಗಳೂರು ಸಂತ ಮದರ್‌ತೆರೇಸಾ ವಿಚಾರ ವೇದಿಕೆ ವತಿಯಿಂದ ಮದರ್ ತೆರೇಸಾ ಅವರ 28ನೇ ಸಂಸ್ಕರಣ ದಿನದ ಅಂಗವಾಗಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿ ರುವ ಸವಾಲುಗಳು’ ಎಂಬ ವಿಷಯದಲ್ಲಿ ಕುದ್ಮುಲ್ […]

Share News

ಮಂಗಳೂರು, ಸೆ. 11: ಬಹುತ್ವ ಬಹುಭಾಷೆ, ಬಹು ಸಂಸ್ಕೃತಿಯೊಂದಿಗೆ ಬೆಳದು ಬಂದಿರುವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಭಾಷೆಯ ಅಧಿಕಾರಶಾಹಿ ರಾಜಕಾರಣಿಗಳ ಒತ್ತಾಸೆಗೆ ಬಲಿಯಾಗದೆ, ಸಂವಿಧಾನದ ಪರವಾಗಿ ನಿಲ್ಲುವ ಮೂಲಕ ಸಹಬಾಳ್ವೆಯನ್ನು ಉಳಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಪ್ರೊ| ಪುರುಷೋತ್ತಮ ಬಿಳಿಮಲೆ ಹೇಳಿದರು.

ಮಂಗಳೂರು ಸಂತ ಮದರ್‌ತೆರೇಸಾ ವಿಚಾರ ವೇದಿಕೆ ವತಿಯಿಂದ ಮದರ್ ತೆರೇಸಾ ಅವರ 28ನೇ ಸಂಸ್ಕರಣ ದಿನದ ಅಂಗವಾಗಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿ ರುವ ಸವಾಲುಗಳು’ ಎಂಬ ವಿಷಯದಲ್ಲಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಡಾ। ಕೆ. ಶರೀಫಾ ಮಾತನಾಡಿ, ಮಹಿಳೆಗೆ ಯಾವುದೇ ಸ್ಥಾನಮಾನ ಸಿಗದ, ಧಾರ್ಮಿಕ ಚೌಕಟ್ಟಿನಿಂದ ಹೊರಗುಳಿಸಿದ್ದ ಸ್ಥಿತಿಯಲ್ಲಿ ಮದರ್ ತೆರೇಸಾ 18ನೇ ವಯಸ್ಸಿನಲ್ಲಿ ಯುಗೋಸ್ಕೋವಿಯಾದಿಂದ ಭಾರತಕ್ಕೆ ಬಂದು ಬಡವರ, ರೋಗಿಗಳ ಸೇವೆಯ ಮೂಲಕ ವಿಶ್ವಕ್ಕೆ ತಾಯ್ತನದೆ ಮಹತ್ವ ತಿಳಿಸಿದ್ದಾರೆ ಎಂದರು.

ಸಂತ ಮದರ್‌ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ ಅಧ್ಯಕ್ಷತೆ ವಹಿಸಿದ್ದರು. ಅವಿಭಜಿತ ದ.ಕ. ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಏಳಿಗಾಗಿ ಶ್ರಮಿಸಿದ, ಡಾ| ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತ ಕರಿಯ ಕೆ. ಅವರನ್ನು ಸಮ್ಮಾನಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ ವಿಶ್ರಾಂತ ಧರ್ಮಾಧ್ಯಕ್ಷ ಆ। ವಂ| ಡಾ। ಅಲೋಶಿಯಸ್ ಪಾವ್ ಡಿ’ಸೋಜಾ, ದಲಿತ ಮುಖಂಡದೇವದಾಸ್, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಮಹಿಳಾ ನಾಯಕಿ ಸುಮತಿ ಎಸ್.ಹೆಗ್ಡೆ ವೇದಿಕೆಯ ಗೌರವ ಸಲಹೆಗಾರ ರೂಪೇಶ್ ಮಾಡ್ತ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಿ ಅಲ್ವಾರಿಸ್, ಮುಖಂಡರಾದ ಮುನೀರ್ ಕಾಟಿಪಳ್ಳ ಕೃಷ್ಣಪ್ಪ ಕೊಂಚಾಡಿ, ಎರಿಕ್ ಲೋಬೋ, ಡಾಕ್ಸಿಡಿ’ಸೋಜಾ ಮೊದಲಾದವರಿದ್ದರು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಷ್‌ ಡಿ’ಸೋಜಾ ಸ್ವಾಗತಿಸಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾಯದರ್ಶಿ ಸುನೀಲ್ ಕುಮಾರ್ ಬಜಾಲ್ ನಿರೂಪಿಸಿದರು.

Share News