• Home  
  • ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಮೆಲ್ವಿನ್ ಜೆ. ಪಿಂಟೋ ನಿಧನ
- HOME - LATEST NEWS

ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಮೆಲ್ವಿನ್ ಜೆ. ಪಿಂಟೋ ನಿಧನ

ಮಂಗಳೂರು: ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್, ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಮತ್ತು ಮಂಗಳೂರು ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದ ಮೆಲ್ವಿನ್ ಜೆ. ಪಿಂಟೋ ಅವರು ನಿಧನರಾಗಿದ್ದಾರೆ. ೧೯೬೩ರಲ್ಲಿ ಜನಿಸಿದ ಫಾದರ್ ಮೆಲ್ವಿನ್ ಪಿಂಟೋ ಅವರು ಸೇಂಟ್ ಅಲೋಶಿಯಸ್‌ನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು. 1981 ರಲ್ಲಿ ಜೆಸ್ಯೂಟ್ ಸಭೆಯನ್ನು ಸೇರಿದ ಇವರು, 1997 ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು. ಇಂಗ್ಲಿಷ್‌ನಲ್ಲಿ ಎಂ.ಎ, ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸೈಕಾಲಜಿ ಮತ್ತು ಕೌನ್ಸೆಲಿಂಗ್‌ನಲ್ಲಿ […]

Share News

ಮಂಗಳೂರು: ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್, ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಮತ್ತು ಮಂಗಳೂರು ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದ ಮೆಲ್ವಿನ್ ಜೆ. ಪಿಂಟೋ ಅವರು ನಿಧನರಾಗಿದ್ದಾರೆ.


೧೯೬೩ರಲ್ಲಿ ಜನಿಸಿದ ಫಾದರ್ ಮೆಲ್ವಿನ್ ಪಿಂಟೋ ಅವರು ಸೇಂಟ್ ಅಲೋಶಿಯಸ್‌ನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು. 1981 ರಲ್ಲಿ ಜೆಸ್ಯೂಟ್ ಸಭೆಯನ್ನು ಸೇರಿದ ಇವರು, 1997 ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು.

ಇಂಗ್ಲಿಷ್‌ನಲ್ಲಿ ಎಂ.ಎ, ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸೈಕಾಲಜಿ ಮತ್ತು ಕೌನ್ಸೆಲಿಂಗ್‌ನಲ್ಲಿ ಡಿಪ್ಲೋಮಾ ಪಡೆದಿದ್ದ ಇವರು ಓರ್ವ ಬಹುಮುಖ ಪ್ರತಿಭೆಯಾಗಿದ್ದರು.

ಹಾಸನದ ಸಂತ ಜೋಸೆಫ್ ಶಾಲೆ ಹಾಗೂ ಬೆಂಗಳೂರಿನ ಸಂತ ಜೋಸೆಫ್ ಇಂಡಿಯನ್ ಪಿಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ವ್ಯಾಟಿಕನ್ ಕಮ್ಯುನಿಕೇಶನ್ಸ್ ಮತ್ತು ವ್ಯಾಟಿಕನ್ ರೇಡಿಯೋದಲ್ಲಿ ಏಷ್ಯಾ ಮತ್ತು ಭಾರತೀಯ ಭಾಷೆಗಳ ಇಂಗ್ಲಿಷ್ ಡೆಸ್ಕ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು.

ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಹಾಗೂ ಮಂಗಳೂರು ಜೆಸ್ಯೂಟ್ ಎಜುಕೇಶನಲ್ ಸೊಸೈಟಿ ಫಾದರ್ ಮೆಲ್ವಿನ್ ಜೆ. ಪಿಂಟೋ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Share News