ಮಂಗಳೂರು: ಅಕ್ಟೋಬರ್ 05 : ಸೆಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿಯು (SSVP) ತನ್ನ ಶತಮಾನೋತ್ಸವ ಕಾರ್ಯಕ್ರಮಗಳ ಹಾಗೂ ಶತಮಾನೋತ್ಸವ ಯೋಜನೆಗಳ ಉದ್ಘಾಟನೆಯನ್ನು ವಂದನೀಯ ಫಾ। ಫಾವುಸ್ಟಿನ್ ಲೋಬೋ ಫ್ರಾ ಮುಲ್ಲರ್ಸ್ ಮೆಡಿಕಲ್ ಕಾಲೇಜ್ ಮತ್ತುಸಂಸ್ಥೆಗಳ ನಿರ್ದೇಶಕರು ಮಂಗಳೂರಿನ ಬಿಷಪ್ಸ್ ಹೌಸ್‌ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಂ| ಫಾ| ಫಾವುಸ್ಟಿನ್ ಲೋಬೋ SSVP ಸಂಸ್ಥೆಯ *ಶಿಕಪ್* ಯೋಜನೆಯ ಆಶಯಗಳನ್ನು ತೋರಿಸುವ ಡಾಕ್ಯುಮೆಂಟರಿ ಪ್ರೋಮೋವನ್ನು ಬಿಡುಗಡೆ ಮಾಡಿದರು. ತಮ್ಮ ಭಾಷಣದಲ್ಲಿ ಫಾ ಲೋಬೋ, ಹಿಂದುಳಿದ ಹಿನ್ನೆಲೆಯ ಮಕ್ಕಳ ಶಿಕ್ಷಣವನ್ನು ಪ್ರಾಮುಖ್ಯತೆ ನೀಡುವಂತೆ ಪ್ರೋತ್ಸಾಹಿಸಿದರು, *’ಶಿಕಪ್’* ‘ ಯೋಜನೆಯು ಸಾಮರ್ಥ್ಯ ನಿರ್ಮಾಣ ಮತ್ತು ಸಬಲೀಕರಣದಲ್ಲಿ ಪಾತ್ರವಹಿಸುತ್ತಿದೆ ಎಂದು ವಿವರಿಸಿದರು. ಅವರು SSVP ಸಂಸ್ಥೆಯ ಸ್ವಾವಲಂಬನೆ ಉತ್ತೇಜಿಸುವ ಬದ್ಧತೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ಶತಮಾನೋತ್ಸವ ಜುಬಿಲಿ ಥೀಮ್ ಸಾಂಗ್ ಬಿಡುಗಡೆ. ಈ ಹಾಡನ್ನು ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿ ಪಿಂಟೋ ಬಿಡುಗಡೆ ಮಾಡಿದರು. ಪ್ರಸಿದ್ದ ಕವಿ ಶ್ರೀ ಲೊಯ್ಡ್ ತಾಕೊಡೆ ಅವರು ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಈ ಹಾಡು ಸಭಿಕರನ್ನು ಆಕರ್ಷಿಸಿ, ಶತಮಾನೋತ್ಸವದ ಅಂತರಾಳವನ್ನು ಎತ್ತಿ ಹಿಡಿಯಿತು. ಶ್ರೀ ಲೊಯ್ಡ್ ತಾಕೊಡೆ ಅವರನ್ನು ಶ್ರೀ ಪಿಂಟೋ ಸನ್ಮಾನಿಸಿದರು, ಮತ್ತು ತಮ್ಮ ಭಾಷಣದಲ್ಲಿ SSVP ಸದಸ್ಯರು ನೀಡುತ್ತಿರುವ ಮಹಾನ್ ಸೇವೆಯನ್ನು ಪ್ರಶಂಸಿಸಿದರು ಮತ್ತು ಮುಂದುವರಿಯುವಂತೆ ಪ್ರೋತ್ಸಾಹಿಸಿದರು.
ಶ್ರೀ ಲುವಿ ಪಿಂಟೋ (ಮಾಂಡ್ ಸೊಭಾಣ್, ಅಧ್ಯಕ್ಷರು); CA ವಲೇರಿಯನ್ ಅಡಾ (KCO ಅಬುಧಾಬಿ ಉಪಾಧ್ಯಕ್ಷರು); ವಂದನೀಯ ಫಾ| ಪ್ಲೇವಿಯನ್ ಲೋಬೋ (SSVP ಆಧ್ಯಾತ್ಮಿಕ ಸಲಹೆಗಾರರು); ಶ್ರೀ ಜ್ಯೋ ಕುವೆಲ್ಲೊ (SSVP ಅಧ್ಯಕ್ಷರು); ಶ್ರೀ ಲಿಗೋರಿ ಫರ್ನಾಂಡಿಸ್ (SSVP ಕಾರ್ಯದರ್ಶಿ); ಶ್ರೀ ಕ್ಲರನ್ಸ್ ಮಚಾಡೋ (SSVP ಖಜಾಂಚಿ); ಮತ್ತು ಶ್ರೀಮತಿ ಫಿಲೋಮೆನಾ ಮೆನೆಜಸ್ (SSVP ಶತಮಾನೋತ್ಸವ ಸಮಿತಿಯ ಅಧ್ಯಕ್ಷೆ), ಇವರ ಉಪಸ್ಥಿತಿಯಿಂದ ಈ ಕಾರ್ಯಕ್ರಮಕ್ಕೆ ಮಹತ್ವ ಮತ್ತು ವೈಭವ ಹೆಚ್ಚಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು.
SSVP ಅಧ್ಯಕ್ಷರಾದ ಶ್ರೀ ಕುವೆಲ್ಲೊ ಸ್ವಾಗತ ಭಾಷಣವನ್ನು ಮಾಡಿದರು, ಅವರು ಸಂಸ್ಥೆಯು ಯೇಸು ಕ್ರಿಸ್ತನ ಹಾದಿಯನ್ನು ಅನುಸರಿಸುವ ಬದ್ಧತೆಯನ್ನು ವಿವರಿಸಿದರು. ಹಾಗೂ ಶತಮಾನೋತ್ಸವ ಯೋಜನೆಗಳನ್ನು ವಿವರಿಸಿದರು, ವಿಶೇಷವಾಗಿ ಶಿಕಪ್’-SSVP ಸಂಸ್ಥೆಯಿಂದ ದತ್ತು ಪಡೆದ ಕುಟುಂಬಗಳವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯವನ್ನು ಒದಗಿಸುವ ಯೋಜನೆ. ಈ ಯೋಜನೆಯ ಅಗತ್ಯತೆ ಮತ್ತು ಯಶಸ್ಸಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಮಹತ್ವವನ್ನು ಅವರು ಒತ್ತಾಯಿಸಿದರು.
SSVP ಆಧ್ಯಾತ್ಮಿಕ ಸಲಹೆಗಾರರಾದ ವಂ| ಫಾ| ಪ್ಲೇವಿಯನ್ ಲೋಬೋ, ಶತಮಾನೋತ್ಸವ ಸಮಾಪನ ಸಮಾರಂಭದಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಸ್ಮರಣಿಕೆಯ ಅಪೀಲನ್ನು ಬಿಡುಗಡೆ ಮಾಡಿದರು. ಅವರು SSVP ಸಂಸ್ಥೆಯ ಅಚಲ ಸೇವೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿದರು ಮತ್ತು ಸದಸ್ಯರಿಗೆ ಹೊಸ ಉತ್ಸಾಹ ಮತ್ತು ಬದ್ಧತೆಯಿಂದ ಮುಂದುವರಿಯಲು ಆಶೀರ್ವಾದ ನೀಡಿದರು.
KCO ಅಬುಧಾಬಿ ಉಪಾಧ್ಯಕ್ಷರಾದ CA ವಾಲೆರಿಯನ್ ಅಲ್ಮೇಡಾ ಬಹು ನಿರೀಕ್ಷಿತ “ಧಬಾಜೊ’ ಕೊಂಕಣಿ ಸಾಂಸ್ಕೃತಿಕ ಸಂಜೆಗಾಗಿ ಪ್ರವೇಶ ಪಾಸುಗಳನ್ನು ಬಿಡುಗಡೆ ಮಾಡಿದರು. ಜನಪ್ರಿಯ ಗಾಯಕ ಶ್ರೀ ನಿಹಾಲ್ ತೌರೋ ಅವರಿಂದ 07/12/2025 ರಂದು ಕುಲಶೆಕರ ಚರ್ಚ್ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ, ಇದು ಕೊಂಕಣಿ ಪರಂಪರೆಯ LIVE ಆಚರಣೆಯಾಗಲಿದೆ. ಪ್ರವೇಶ ಪಾಸ್‌ಗಳನ್ನು ಸಭೆಗೆ ವಿತರಿಸಲಾಯಿತು, ಮತ್ತು ಶ್ರೀ ಅಲ್ಮೇಡಾ ಈ ಸಾಂಸ್ಕೃತಿಕ ಸಂಜೆಯ ಯಶಸ್ಸಿಗೆ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮವು SSVP ಶತಮಾನೋತ್ಸವ ಸಮಿತಿಯ ಅಧ್ಯಕ್ಷೆ ಶ್ರೀಮತಿ ಫಿಲೋಮೆನಾ ಮೆನೆಜಸ್ ಅವರ ಧನ್ಯವಾದಗಳೊಂದಿಗೆ ಮುಕ್ತಾಯವಾಯಿತು. ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ SSVP ಸಂಸ್ಥೆಯ ನೂರು ವರ್ಷಗಳ ಸೇವೆ, ದಯೆ ಮತ್ತು ಸಾಮಾಜಿಕ ಉನ್ನತಿಗೆ ಸಾಕ್ಷಿಯಾಗಿದೆ. ಸಂಸ್ಥೆ ತನ್ನ ಸ್ಥಾಪನೆಯ ತತ್ವಗಳಿಗೆ ಬದ್ಧವಾಗಿದ್ದು, ಮುಂದಿನ ಶತಮಾನದಲ್ಲಿ ಪರಿವರ್ತನೆಯ ಕಾರ್ಯವನ್ನು ಮುಂದುವರಿಸಲು ಸಿದ್ಧವಾಗಿದೆ.