*ರಜತ ಮಹೋತ್ಸವ ಆಚರಣೆ: ಪೇಸ್ ಸಿಲ್ವಿಯೋರಾ 2025*
ಪೇಸ್ ಗ್ರೂಪ್ ತನ್ನ ರಜತ ಮಹೋತ್ಸವದ ಅಂಗವಾಗಿ “ಸಿಲ್ವಿಯೋರಾ 2025” ಎಂಬ ಶೀರ್ಷಿಕೆಯಲ್ಲಿ ಅತ್ಯಂತ ಸ್ಮರಣೀಯ ಕ್ಷಣವನ್ನು ಅಕ್ಟೋಬರ್ 14ರಂದು ಪೇಸ್ ಜ್ಞಾನ ನಗರದಲ್ಲಿ ಅಧಿಕೃತ ಬ್ಯಾನರ್ ಅನಾವರಣದೊಂದಿಗೆ ಆಚರಿಸಿತು. ಈ ಕಾರ್ಯಕ್ರಮವು ಸಂಸ್ಥೆಯ 25 ವರ್ಷದ ಯಶಸ್ವಿ ಪ್ರಯಾಣದ ಮಹತ್ವದ ಮೈಲುಗಲ್ಲುಗಳನ್ನು ಗುರುತಿಸಿತು.

ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫ್ರಾಜ್ ಜೆ ಹಾಸಿಮ್ ಅವರು ಸಭಿಕರನ್ನು ಸ್ವಾಗತಿಸಿ, ರಜತ ಮಹೋತ್ಸವದ ಸಂಭ್ರಮದ ಕುರಿತು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ಅವರು ಸಂಸ್ಥೆಯ 25 ವರ್ಷದ ಪ್ರಯಾಣದ ಕುರಿತು ಸ್ಮರಣೀಯ ಅನುಭವವನ್ನು ತಿಳಿಸಿ , ಭವಿಷ್ಯದ ಗುರಿಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪೇಸ್ ಗ್ರೂಪ್ನ ವಿವಿಧ ಘಟಕಗಳ ಪ್ರಾಂಶುಪಾಲರು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ಸಂಸ್ಥೆಯ ಇತಿಹಾಸವನ್ನು ಸ್ಮರಿಸಿ, ಮುಂಬರುವ ವಿಶ್ವವಿದ್ಯಾನಿಲಯದ ಗುರಿಯನ್ನು ಸಾಧಿಸಲು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ಅವರು ಹಾಜರಿದ್ದ ಸರ್ವರಿಗೂ ಧನ್ಯವಾದವನ್ನು ಸಲ್ಲಿಸಿದರು.
ರಜತ ಮಹೋತ್ಸವದ ಅಂಗವಾಗಿ ನಾನಾ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಬ್ಯಾನರ್ ಅನಾವರಣ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.