ಮಂಗಳೂರು: ನಗರದ ಮಿಲಾಗ್ರಿಸ್ ಸಭಾಭವನದಲ್ಲಿ ಶನಿವಾರ ರಾತ್ರಿ ಅತ್ಯಂತ ವೈಭವದಿಂದ ನಡೆದ ‘ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026’ ಸೌಂದರ್ಯ ಸ್ಪರ್ಧೆಯ ಮಹೋನ್ನತ ಅಂತಿಮ ಸುತ್ತಿನಲ್ಲಿ ಮಂಗಳೂರಿನ ಪ್ರತಿಭೆ ಶಿಖಾ ಸುಶೀಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಪ್ರಥಮ ರನ್ನರ್ ಅಪ್: ಸೆರೆನಾ ಎವ್ಜಿನ್
ದ್ವಿತೀಯ ರನ್ನರ್ ಅಪ್: ಫೇ ಮಾರ್ಟಿಸ್
ಬಹುಮಾನ ಮೊತ್ತ: ವಿಜೇತ ಶಿಖಾ ಸುಶೀಲ್ 3 ಲಕ್ಷ ರೂ., ಪ್ರಥಮ ರನ್ನರ್ ಅಪ್ 2 ಲಕ್ಷ ರೂ. ಹಾಗೂ ದ್ವಿತೀಯ ರನ್ನರ್ ಅಪ್ 1 ಲಕ್ಷ ರೂ. ನಗದು ಬಹುಮಾನದೊಂದಿಗೆ ಕಿರೀಟ ಮತ್ತು ಗೌರವಗಳನ್ನು ಸ್ವೀಕರಿಸಿದರು. ಅಂತಿಮ ಸುತ್ತಿನಲ್ಲಿದ್ದ ಉಳಿದ 9 ಸ್ಪರ್ಧಿಗಳಿಗೆ ತಲಾ 25 ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು.
ಹಿಸ್ನಾ ಇಂಟರ್ ನ್ಯಾಶನಲ್‌ನ ನಿರ್ದೇಶಕರಾದ ರೊನಾಲ್ಡ್ ಪಿಂಟೊ ಮತ್ತು ದೊರೊತಿ ಪಿಂಟೊ ಅವರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಇಪ್ಪತ್ತೈದು ಸ್ಪರ್ಧಿಗಳು ಎರಡನೇ ಹಂತಕ್ಕೆ ಆಯ್ಕೆಯಾಗಿದ್ದರು, ಅವರಲ್ಲಿ ಅಂತಿಮವಾಗಿ ಶಿಖಾ ಸುಶೀಲ್ ‘ಎಕ್ಸ್ ಫಾಕ್ಟರ್’ ವಿಭಾಗದಲ್ಲಿ ಮಿಂಚುವ ಮೂಲಕ ಜಯಶಾಲಿಯಾದರು.