ಬೆಂಗಳೂರು .ಅಕ್ಟೋಬರ್.15: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀಮತಿ ಶಾಲೆಟ್ ಪಿಂಟೋ ರವರು ಬೆಂಗಳೂರುನ ಮಂಡಳಿಯ ಕಛೇರಿಯಲ್ಲಿ ಇವತ್ತು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಮಾಜಿ ಸಚಿವರಾದ ರಮಾನಾಥ ರೈ,ಅಭಯಚಂದ್ರಜೈನ್,ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮೆಸ್ಕಾಂ ಅದ್ಯಕ್ಷರಾದ ಹರೀಶ್ ಕುಮಾರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎ ಗಫೂರ್,ಕನಿಷ್ಠ ವೇತನ ಮಂಡಳಿಯ ಅದ್ಯಕ್ಷರಾದ ಟಿ ಎಂ ಶಹೀದ್,ಸಾವಯವ ಕೃಷಿ ನಿಗಮದ ಅದ್ಯಕ್ಷರಾದ ಲಾವಣ್ಯ ಬಲ್ಲಾಳ್, ಗಾಣಿಗ ನಿಗಮದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಬ್ಲಾಸಮ್ ಫೆರ್ನಾಂಡಿಸ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ, ಪದ್ಮರಾಜ್ ಪೂಜಾರಿ,ರಕ್ಷಿತ್ ಶಿವರಾಂ,ಹಿಂದುಳಿದ ವರ್ಗ ಆಯೋಗದ ಸದಸ್ಯರಾದ ಪ್ರತಿಭಾ ಕುಳಾಯಿ,ರವಿಶಂಕರ್ ಶೆಟ್ಟಿ ಹಾಗೂ ಸುಮಂತ್ ರಾವ್ ರೋಹಿನಿ ಪ್ರಿಯಾ ಜಿಲ್ಲಾ ಮಹಿಳಾ ಕಾಂಗ್ರೆಸಿನ ಅಧ್ಯಕ್ಷರಾದ ಅಪಿ ಹಾಗು ಉಷಾ ಅಂಚ ನ್ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾದನವಾಜ ಎನ್ ಎಸ್ ಯು ಐ ಅಧ್ಯಕ್ಷರಾದ ಸುಹಾನ್ ಆಳ್ವ ಮಹಿಳಾ ಕಾಂಗ್ರೆಸ್ಸಿನ ಬ್ಲಾಕ್ ಅಧ್ಯಕ್ಷರುಗಳು ರಾಜ್ಯ ಪದಾಧಿಕಾರಿಗಳು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.












