canaratvnews

*ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ ಕುರಿತು ವಿಚಾರ ಸಂಕಿರಣ*

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (Special Intensive Revision – SIR) ಕುರಿತು ಮಹತ್ವದ ವಿಚಾರ ಸಂಕಿರಣ ಕಾರ್ಯಕ್ರಮವು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಶ್ರೀ ಸುಧೀರ್ ಕುಮಾರ್ ಮುರೊಳ್ಳಿ ಹಾಗೂ ಜಾಗೃತ ಕರ್ನಾಟಕದ ಸಂಚಾಲಕರಾದ ಡಾ. ವಾಸು ಎಚ್.ವಿ. ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣದ ಅಗತ್ಯತೆ ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗೃತಿ ವಹಿಸುವ ಬಗ್ಗೆ ಸುದೀರ್ಘವಾಗಿ ವಿಚಾರ ವಿನಿಮಯ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ, ಪ್ರಮುಖ ಮುಖಂಡರಾದ ಪ್ರಭಾಕರ್ ಶ್ರಿಯಾನ್, ಕೆ.ಪಿ.ಥೋಮಸ್, ಸದಾಶಿವ ಶೆಟ್ಟಿ ಸುರತ್ಕಲ್, ಮುನೀರ್ ಬನ್ಸಾಲ್, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೊ, ಯು.ಎಚ್.ಉಮ್ಮರ್, ಜೆ.ಅಬ್ದುಲ್ ಸಲೀಂ, ಪದ್ಮನಾಭ ಕೋಟ್ಯಾನ್, ಮೋಹನ್ ಕೋಟ್ಯಾನ್, ಪುರುಷೋತ್ತಮ ಚಿತ್ರಾಪುರ, ನಾಗೇಶ್ ಗೌಡ, ಶಾಹುಲ್ ಹಮೀದ್ ಕೆ.ಕೆ, ಅಪ್ಪಿ, ಕೇಶವ ಮರೋಳಿ, ಲ್ಯಾನ್ಸಿ ಲೋಟೊ ಪಿಂಟೊ, ಹೊನ್ನಯ್ಯ, ಮಹೋನ್ ಚಂದ್ರ, ಮನೋರಾಜ್ ರಾಜೀವ, ಮಂಜುಳಾ ನಾಯಕ್, ನೀರಜ್ ಚಂದ್ರಪಾಲ್, ದಿನೇಶ್‌ ಮುಳೂರು, ಪದ್ಮಪ್ರಸಾದ್ ಜೈನ್, ಜೆಸಿಂತಾ ಆಲ್ಫ್ರೆಡ್, ಪ್ರೇಮ್ ನಾಥ್, ಮೆಲ್ವಿನ್ ಡಿಸೋಜಾ, ಅಶೋಕ್ ಡಿ.ಕೆ, ಗಿರೀಶ್ ಶೆಟ್ಟಿ, ಗಿರೀಶ್ ಆಳ್ವ, ರೂಪಾ ಚೇತನ್, ಚಂದ್ರಕಲಾ ಜೋಗಿ, ರಜನೀಶ್, ಹಯಾತುಲ್ಲಾ ಖಾಮಿಲ್, ಇಲ್ಯಾಸ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೇನಿಸ್ ಡಿಸಿಲ್ವ ಸ್ವಾಗತಿಸಿದರು. ಟಿ.ಕೆ.ಸುಧೀರ್ ವಂದಿಸಿದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Share News
Exit mobile version