canaratvnews

*ಮಂಗಳೂರಿನಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಸಭೆ*

ಮಂಗಳೂರು: ನ 25: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ದ ರಾಷ್ಟ್ರೀಯ ಪ್ರತಿನಿಧಿ ಸಭೆ‌ (NRC) ಜನವರಿ 20 ಮತ್ತು 21, 2026 ರಂದು ಮಂಗಳೂರು ನಗರದಲ್ಲಿ ನಡೆಯಲಿದೆ.ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಆಯೋಜನಾ ಸಮಿತಿ ಸಭೆ ಮಂಗಳೂರಿನಲ್ಲಿ ನಡೆಯಿತು.

ಈ ರಾಷ್ಟ್ರೀಯ ಪ್ರತಿನಿಧಿ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ನಾಯಕರು ಭಾಗವಹಿಸಲಿದ್ದು, ಮುಂದಿನ 3 ವರ್ಷಗಳ ಅವಧಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ನಾಯಕರನ್ನು ಮತ್ತು ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಲ್ಲಿ ನಡೆಯಲಿದೆ. ಪ್ರಸ್ತುತ ಅವಧಿಯ ಚಟುವಟಿಕೆಗಳ ವರದಿಯನ್ನು ಪರಿಶೀಲಿಸುವ ಜೊತೆಗೆ, ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿಯನ್ನು ಕೂಡ ಚರ್ಚಿಸಲಾಗುತ್ತದೆ.

ಮಂಗಳೂರಲ್ಲಿ ನಡೆದ ಪೂರ್ವ ತಯಾರಿ ಕುರಿತು ಆಯೋಜನಾ ಸಮಿತಿ ಸಭೆಯಲ್ಲಿ NRC ಕಾರ್ಯಕ್ರಮದ ನಿರ್ದೇಶಕರಾದ ಮುಹಮ್ಮದ್ ಅಶ್ರಫ್, ಸಹ ನಿರ್ದೇಶಕರಾದ ಅಬ್ದುಲ್ ಮಜೀದ್ ಫೈಝಿ, ಸಂಯೋಜಕರಾದ ರಿಯಾಜ್ ಫರಂಗಿಪೇಟೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ಕರ್ನಾಟಕ ರಾಜ್ಯ ಕಾರ್ಯನಿರ್ವಹಣಾ ಅಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮುಜಾಹಿದ್ ಪಾಷಾ ಮತ್ತು ಅಬ್ದುಲ್ ಮಜೀದ್ ತುಂಬೆ, ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೆ, ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಉಡುಪಿ ಜಿಲ್ಲಾಧ್ಯಕ್ಷ ಅಸಿಫ್ ಕೋಟೇಶ್ವರ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.

Share News
Exit mobile version