ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಬ್ಯಾಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ 113 ಶಾಖೆಗಳ ಮೂಲಕ ಆರ್ಥಿಕ ವರ್ಷದಲ್ಲಿ ಅಮೋಘ ಸಾಧನೆಯ
2026ರ ಮಾರ್ಚ್ ತಿಂಗಳ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.131.14ಕೋಟಿ ಲಾಭ ಗಳಿಸಿದೆ.

ಇದು ಕಳೆದ ವರ್ಷದ ಲಾಭ (ರೂ.110.41 ಕೋಟಿ) ಕ್ಕಿಂತ ಶೇಕಡಾ 18.78% ಏರಿಕೆಯಾಗಿದೆ. ಇದು ರಾಜ್ಯದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಪೈಕಿ ಸಾರ್ವಕಾಲಿಕ ದಾಖಲೆ ಲಾಭಗಳಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ಅಧ್ಯಕ್ಷ ಇದರ ಅಧ್ಯಕ್ಷರಾದ ಡಾ। ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.