canaratvnews

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಲಿಜನ್ ನ ಯೂತ್ ವಿಂಗ್* ನ *SALUTE THE SILENT STAR* ಕಾರ್ಯಕ್ರಮದಲ್ಲಿ ಪತ್ರಕರ್ತ ರಾಮಚಂದ್ರ ಭಟ್ ಸನ್ಮಾನ

ಮಂಗಳೂರು : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಲಿಜನ್ ನ ಯೂತ್ ವಿಂಗ್* ನ *SALUTE THE SILENT STAR* ಕಾರ್ಯಕ್ರಮದಲ್ಲಿ ಮಂಗಳೂರಿನ ಡೀಲ್ಸ್ ಗ್ರೂಪ್ ಹಾಗೂ ಟೀಂ ಬಿ ಹ್ಯೂಮನ್ ಹಾಗೂ ಇದರ ಸಂಸ್ಥಾಪಕರಾದ ಆಸೀಫ್ ಡೀಲ್ಸ್ ಇವರ ಉಪಸ್ಥಿತಿಯಲ್ಲಿ. ಹಿರಿಯ ಪತ್ರಕರ್ತ ರಾಮಚಂದ್ರ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು

ಇವರು ಕಳೆದ 30 ವರ್ಷಗಳಿಂದ ಮಂಗಳೂರಿನ ವಿವಿಧ ವಾರ್ತಾ ಸಂಚಿಕೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಇವರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಹಾಗೂ ಯೂತ್ ವಿಂಗ್ ಸೇರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಮಂಗಳೂರು ದಿಶಾ ಇದರ ಅಧ್ಯಕ್ಷರಾದ ಮೇರಿ ಶಾಂತಿಸ್ ಹಾಗೂ
ಯೂತ್ ವಿಂಗ್ಸ್ ಅಧ್ಯಕ್ಷರಾದ ಏಂಜಲ್ ಸಿಕ್ವೆರಾ ಕಾರ್ಯದರ್ಶಿ ರಶ್ಮಿ ಸಿಕ್ವೇರಾ ಹಾಗೂ ಮಂಗಳೂರಿನ ಹಲವಾರು ಸಮಾಜ ಸೇವೆಯಲ್ಲಿ ತೊಡಗಿರುವ ಬಿ ಹ್ಯೂಮನ್ ನ ಆಸೀಫ್ ಡೀಲ್ಸ್, ಇಮ್ತಿಯಾಜ್ ಅಹ್ಮದ್ ,ಅಬ್ಬಾಸ್ ಉಚ್ಚಿಲ್, ಇಮ್ತಿಯಾಜ್ ಗೋಲ್ಡನ್, ಮಾಣಿಕ್ ಇದ್ದಿಕುಂಜಿ ಹನೀಫ್ ತೋಡಾರ್, ಅಬ್ದುಲ್ ಗಫರ್. ಹಾಗೂ ಇತರ ಸದ್ಯಸರು ಉಪಸ್ಥಿತಿಯಲ್ಲಿದ್ದರು.

Share News
Exit mobile version