ಮಂಗಳೂರು : ನ 17: ರಚನಾ – ಮಂಗಳೂರಿನ ಕಥೊಲಿಕ ವಾಣಿಜ್ಯ ಮಹಾಮಂಡಳಿಯ 26 ನೇ ಮಹಾಸಭೆಯು ನ16 ರಂದು ನಗರದ ಬೆಂದೂರು ಸಭಾಂಗಣದಲ್ಲಿ ನೆರವೇರಿತು. ಕ್ರೈಸ್ತ ಮುಖಂಡ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಗೊಂಡರು.

ಕ್ರೈಸ್ತ ಸಮುದಾಯದ ಉದ್ಯಮಶೀಲತೆಯನ್ನು ಹೆಚ್ಚಿಸಲು 1999 ರಲ್ಲಿ ಆರಂಭಗೊಂಡ ರಚನಾ ಇದುವರೆಗೆ ಉದ್ಯಮಿಗಳನ್ನು ಬಲಪಡಿಸಲು ಹಾಗೂ ಯುವಜನತೆ ಉದ್ಯಮ ರಂಗಕ್ಕೆ ಬರಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ರಚನಾ ಪ್ರಶಸ್ತಿಗಳ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದೆ.
ಇತರೆ ಪದಾಧಿಕಾರಿಗಳು: ಉಪಾಧ್ಯಕ್ಷ – ಲೆಸ್ಲಿ ರೇಗೊ, ಕಾರ್ಯದರ್ಶಿ – ಎಲ್ರೊನ್ ರೊಡ್ರಿಗಸ್, ಜತೆ ಕಾರ್ಯದರ್ಶಿ – ಜೇಮ್ಸ್ ಮಾಡ್ತಾ, ಕೋಶಾಧಿಕಾರಿ – ನವೀನ್ ಲೋಬೊ ಹಾಗೂ ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೋಮ್ಸ್, ಜೊಕಿಂ ಸ್ಟ್ಯಾನಿ ಆಲ್ವಾರಿಸ್, ವಿಲಿಯಮ್ ಡಿಸೋಜ, ನೆಲ್ಸನ್ ಮೊಂತೇರೊ ಮತ್ತು ಸುನೀಲ್ ವಾಸ್ ಇವರುಗಳು ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು. ಗಿಲ್ಬರ್ಟ್ ಡಿಸೋಜ ಚುನಾವಣಾ ಪ್ರಕ್ರಿಯೆಗಳನ್ನು ಮುನ್ನಡೆಸಿದರು.


