canaratvnews

ರೊಸಾರಿಯೋ ಪ್ರೀಮಿಯರ್ ಲೀಗ್ (RPL): ಅದ್ಧೂರಿ ಆಟಗಾರರ ಹರಾಜು ಮತ್ತು ಜೆರ್ಸಿ ಬಿಡುಗಡೆ

ಮಂಗಳೂರು: ರೊಸಾರಿಯೋ ಕೆಥೆಡ್ರಲ್‌ನ ICYM ಘಟಕದ ವತಿಯಿಂದ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘ರೊಸಾರಿಯೋ ಪ್ರೀಮಿಯರ್ ಲೀಗ್’ (RPL) ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಹರಾಜು ಪ್ರಕ್ರಿಯೆ ಮತ್ತು ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಅತ್ಯಂತ ಉತ್ಸಾಹದಿಂದ ನಡೆಯಿತು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ದಾನಾ
ಅವರು ವಿವಿಧ ತಂಡಗಳ ಜೆರ್ಸಿಗಳನ್ನು ಅನಾವರಣಗೊಳಿಸಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಖ್ಯಾತ ಹರಾಜುದಾರರಾದ ಆಲ್ವಿನ್ ಡಿ’ಸೋಜಾ ಅವರು ಅತ್ಯಂತ ರೋಚಕವಾಗಿ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ. ವಲೇರಿಯನ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ಫಾ. ಜೈಸನ್ ಲೋಬೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಿರಿಲ್ ರೊಸಾರಿಯೋ, ಕಾರ್ಯದರ್ಶಿ ಐಡಾ ಫುರ್ಟಾಡೊ ಮತ್ತು ICYM ರೊಸಾರಿಯೋ ಅಧ್ಯಕ್ಷೆ ಲಕ್ಷ್ಯ ನೊರೊನ್ಹಾ ಉಪಸ್ಥಿತರಿದ್ದರು.

ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಮತ್ತು ಮಾಲೀಕರು: ಗ್ಲೋರಿ ಹಂಟರ್ಸ್ ರೊಸಾರಿಯೊ:
  1. ಮಾಲೀಕರು – ನೆಲ್ಸನ್ ಡಿಸೋಜಾ (ಐಕಾನ್ ಆಟಗಾರ: ವಿನ್ಸೆಂಟ್ ಡಿಸೋಜಾ)
  2. ರೊಸಾರಿಯೊ ಟೈಟನ್ಸ್‌:

    ಮಾಲೀಕರು – ಆಲ್ಡ್ರಿನ್ ವಾಜ್ (ಐಕಾನ್ ಆಟಗಾರ: ಲಕ್ಷ್ಯ ನೊರೊನ್ಹಾ)
  3. ರೊಸಾರಿಯೊ ಸೂಪರ್ ಕಿಂಗ್ಸ್:

    ಮಾಲೀಕರು – ಆಸ್ಟನ್ ಫೆರ್ನಾಂಡಿಸ್ (ಐಕಾನ್ ಆಟಗಾರ: ವಿಜಯ್ ಫೆರ್ನಾಂಡಿಸ್)
  4. ಸ್ಟ್ರೈಕ್ ಫೋರ್ಸ್ ರೊಸಾರಿಯೊ:

    ಮಾಲೀಕರು – ರಾಯಲ್ ಡಿಸಿಲ್ವಾ (ಐಕಾನ್ ಆಟಗಾರ: ವಾಲ್‌ಸ್ಟನ್)
  5. ರಾಯಲ್ ಚಾಲೆಂಜರ್ಸ್ ರೊಸಾರಿಯೊ:

    ಮಾಲೀಕರು – ಹೀವನ್ ಡಿ’ಸೋಜಾ (ಐಕಾನ್ ಆಟಗಾರ: ವಿವೇಕ್ ಫೆರ್ನಾಂಡಿಸ್) ಈ ಕ್ರೀಡಾಕೂಟವು ಸ್ಥಳೀಯ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಲಿದ್ದು, ಎಲ್ಲಾ ತಂಡಗಳ ಮಾಲೀಕರು ಮತ್ತು ಐಕಾನ್ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು
Share News
Exit mobile version