• Home  
  • ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ: JDS ನಾಯಕಿಯ ಮಗನ ಬಂಧನ
- DAKSHINA KANNADA - HOME - LATEST NEWS

ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ: JDS ನಾಯಕಿಯ ಮಗನ ಬಂಧನ

ಕಾರವಾರ: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ JDS ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್​​ ಪುತ್ರ ಆರೋಪಿ ಚಿರಾಗ್​​ನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್​ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9ರಂದು ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನ ಪ್ರಿತಿಸುವಂತೆ ಚಿರಾಗ್ ಪೀಡಿಸುತ್ತಿದ್ದ ಎಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಅವರು ಜನವರಿ 10 […]

Share News

ಕಾರವಾರ: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ JDS ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್​​ ಪುತ್ರ ಆರೋಪಿ ಚಿರಾಗ್​​ನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್​ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9ರಂದು ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನ ಪ್ರಿತಿಸುವಂತೆ ಚಿರಾಗ್ ಪೀಡಿಸುತ್ತಿದ್ದ ಎಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಅವರು ಜನವರಿ 10 ರಂದು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಗಳ ದೇಹದ ಮೇಲೆ ಕಚ್ಚಿದ ಮಾರ್ಕ್ ಇರುವುದನ್ನು ಕಂಡು ತಂದೆ ಅತ್ಯಾಚಾರದ ಅನುಮಾನ ವ್ಯಕ್ತಪಡಿಸಿದ್ದರು. ಅತ್ತ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ, ಇತ್ತ ಆರೋಪಿ ಚಿರಾಗ್ ತನ್ನ ತಂದೆ-ತಾಯಿ ಜೊತೆ ನಾಪತ್ತೆ ಆಗಿದ್ದ. 20 ದಿನಗಳಿಂದ ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ತನ್ನ ಅಂಕಲ್ ಜತೆ ಚೆನ್ನೈನಲ್ಲಿದ್ದ ಚಿರಾಗ್​​ನನ್ನು​ ಇದೀಗ ಬಂಧಿಸಿದ್ದಾರೆ.

ಕಾರವಾರ ಜಿಲ್ಲಾ ನ್ಯಾಯಲಯದಲ್ಲಿ ಪ್ರಕರಣದ ಅರ್ಜಿ ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲ ನಾಗರಾಜ್ ನಾಯ್ಕ್​​ ಸುಮಾರು 2500 ಪುಟಗಳ ಚಾಟಿಂಗ್ ಲಿಸ್ಟ್ ಸೇರಿದಂತೆ ಹತ್ತಾರು ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದರು. ತೀರ್ಪು ಕಾಯ್ದಿರಿಸಿ ಜನವರಿ 31ಕ್ಕೆ ಮುಂದೂಡಲಾಗಿದೆ.

Share News