ಆರೋಗ್ಯಕರವಾಗಿರಲು ಆಹಾರವನ್ನುಸೇವನೆ ಮಾಡುವುದು ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡುವುದು ಅಷ್ಟೇ ಮುಖ್ಯ. ಬಹುತೇಕರು ರಾತ್ರಿ ತಡವಾಗಿ ಆಹಾರ ಸೇವನೆ ಮಾಡುತ್ತಾರೆ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಆರೋಗ್ಯವಂತರಾಗಿರಲು ಈ ನಿಗದಿತ ಸಮಯದೊಳಗೆ ಊಟ ಮಾಡಿ ಮುಗಿಸಬೇಕು. ಇತ್ತೀಚಿನ ಸಮಯದಲ್ಲಿ ಪ್ರತಿಯೊಬ್ಬರು ರಾತ್ರಿ 9 ಗಂಟೆಯ ನಂತರವೇ ಊಟ ಮಾಡುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಂಜೆ 6 ರಿಂದ ರಾತ್ರಿ 8 ಗಂಟೆಯ ಒಳಗೆ ರಾತ್ರಿಯ ಊಟವನ್ನು ಮಾಡಬೇಕಂತೆ. ಇದರಿಂದ ಉಪಯೋಗಯೋಗಗಳೇನು ನೊಡೋಣ ಬನ್ನಿ.

ರಾತ್ರಿ ಬೇಗ ಊಟ ಮಾಡುವುದರಿಂದ ದೇಹವು ಮಲಗುವ ಮುನ್ನ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಇದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
ನಾವು ಮಲಗುವ 2 ರಿಂದ 3 ಗಂಟೆಗಳ ಮೊದಲು ಊಟ ಮಾಡಿದಾಗ ದೇಹಕ್ಕೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ. ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ. ಅದೇ ತಡವಾಗಿ ತಿನ್ನುವುದರಿಂದ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ, ಇದು ನಿದ್ರೆಗೂ ಅಡ್ಡಿಪಡಿಸುತ್ತದೆ.
ರಾತ್ರಿ ಗೊತ್ತು ಬೇಗ ಊಟ ಮಾಡುವ ಅಭ್ಯಾಸ ತೂಕ ನಿರ್ವಹಣೆಗೂ ತುಂಬಾನೇ ಸಹಕಾರಿ. ಸಂಜೆ 6 ರಿಂದ 8 ಗಂಟೆಯ ಒಳಗೆ ಭೋಜನ ಮಾಡುವುದರಿಂದ ಮೆಲಟೋನಿನ್ ಮತ್ತು ಕಾರ್ಟಿಸೋಲ್‌ನಂತಹ ಹಾರ್ಮೋನುಗಳು ಸಮತೋಲನದಲ್ಲಿರುತ್ತದೆ. ಇದು ದೇಹದ ಸಿರ್ಕಾಡಿಯಲ್ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

