ಮಂಗಳೂರು: ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾ.31 ಹಾಗೂ ಏ.1 ರಂದು ಗುಡುಗು ಸಹಿತ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಕೆಲವೆಡೆ ಮಳೆ ಶುಕ್ರವಾರ ಕರಾವಳಿಯ ಹಲವೆಡೆ ಹಗಲಿನಲ್ಲಿ ಮೋಡದ ವಾತಾವರಣ ಇತ್ತು.
ರಾತ್ರಿಯ ವೇಳೆ ಪಶ್ಚಿಮ ಘಟ್ಟದ ತಪ್ಪಲು ಭಾಗದ ಮುಂಡಾಜೆ, ಕಡಿರುದ್ಯಾವರ, ಮುಂಡಾಜೆ, ಮಡಂತ್ಯಾರು, ಬೆಳ್ತಂಗಡಿ, ಧರ್ಮಸ್ಥಳ, ಗುರಿಪ್ಪಳ್ಳ, ಬಂದಾರು. ಕನ್ಯಾಡಿ ಮತ್ತು ಬಂಟ್ವಾಳ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ ಇತ್ತು.
ಬಳಿಕ ಬಿಸಿಲು ಮತ್ತು ಸೆಕೆಯ ತೀವ್ರತೆ ಹೆಚ್ಚು ಇತ್ತು. ಮಂಗಳೂರಿನಲ್ಲಿ 33 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.2 ಡಿ.ಸೆ. ಕಡಿಮೆ ಮತ್ತು 25.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.4 ಡಿ.ಸೆ. ಉಷ್ಣಾಂಶ ಏರಿಕೆ ಕಂಡಿತ್ತು.