ಪೆರುವಾಯಿ, ಬಂಟ್ವಾಳ ತಾಲೂಕಿನ ವಿಟ್ಲ ಪೆರುವಾಯಿ ಸಮೀಪದ ಓಣಿಬಾಗಿಲು ಬಳಿ ರಸ್ತೆಗೆ ಗುಡ್ಡ ಕುಸಿತವಾಗಿದೆ. ಘಟನೆಯಲ್ಲಿ ರಸ್ತೆ ಬಂದ್ ಆಗಿ ಕೆಲವು ಸಮಯ ಸಂಚಾರ ಬಂದ್ ಆಗಿತ್ತು. ಪಕಳಕುಂಜದಿಂದ ಮಂಗಳೂರು, ಪುತ್ತೂರು ಹಾಗೂ ವಿಟ್ಲಕ್ಕೆ ತೆರಳುವ ಬಸ್ ಸಂಚಾರ ವ್ಯತ್ಯಯವಾಯಿತು. ಬೆಳ್ಳಂಬೆಳಗ್ಗೆ ಕೆಲಸಕ್ಕೆ ತೆರಳುವವರು ಪರದಾಡುವಂತಾಯಿತು. ಬಳಿಕ ಸ್ಥಳೀಯರ ಸಹಕಾರದಿಂದ ಅಲ್ಪ ಪ್ರಮಾಣದಲ್ಲಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಓಣಿಬಾಗಿಲು ಬಳಿ ಈ ಹಿಂದೆ ಅನೇಕ ಬಾರಿ ಗುಡ್ಡ ಕುಸಿದಿದ್ದು, ಶಾಶ್ವತ ಪರಿಹಾರ ಕೈಗೊಂಡಿಲ್ಲ.
