canaratvnews

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ ಆಸ್ಪತ್ರೆಗೆ ಭೇಟಿ‌ನೀಡಿದ ಶಾಸಕ ಅಶೋಕ್ ರೈ

ಪುತ್ತೂರು: ಅ. 20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ 2025 ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಪತಿಣಾಮ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನೇದಿದ್ದು, ಸೋಮವಾರ ರಾತ್ರಿ ಆಸ್ಪತ್ರೆಗೆ ಭೇಟಿ‌ನೀಡಿದ ಶಾಸಕ ಅಶೋಕ್ ರೈ ಅವರ ಅವರ ಆರೋಗ್ಯ ವಿಚಾರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನದ ವೇಳೆ ಉಡುಗೋರೆ ವಿತರಣೆ ವೇಳೆ ಜನಸಂದಣಿಯಿಂದ ಸುಮಾರು

ಏಳೆಂಟು‌ಮಂದಿ‌ಅಸ್ವಸ್ಥರಾಗಿದ್ದರು.‌ಅಸ್ವಸ್ಥರಾದವನ್ನು ಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ವಸ್ಥರಾದವರು ಚಿಕಿತ್ಸೆ ಪಡೆದು ತೆರಳಿದ್ದಾರೆ.ಮಹಿಳೆಯರಿಬ್ಬರು ರಾತ್ರಿ ವೇಳೆ ಆಸ್ಪತ್ರೆಯಲ್ಲಿದ್ದು ಅವರನ್ನು ಶಾಸಕ‌ಅಶೋಕ್ ರೈ ಭೇಟಿ ಆರೋಗ್ಯ ವಿಚಾರಿಸಿದರು.‌ಬಳಿಕ ರಾತ್ರಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

Share News
Exit mobile version