• Home  
  • ಬಿಜೆಪಿಯವರ 13 ಸುಳ್ಳುಗಳಿಗೆ  ಉತ್ತರ ಕೊಡುತ್ತೇವೆ ಬನ್ನಿ ಎಂದು ಶಾಸಕ ಅಶೋಕ್ ರೈ
- DAKSHINA KANNADA - HOME

ಬಿಜೆಪಿಯವರ 13 ಸುಳ್ಳುಗಳಿಗೆ  ಉತ್ತರ ಕೊಡುತ್ತೇವೆ ಬನ್ನಿ ಎಂದು ಶಾಸಕ ಅಶೋಕ್ ರೈ

ಮಂಗಳೂರು ಜೂನ್ 30  ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ವತಿಯಿಂದ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿ 13 ಸುಳ್ಳುಗಳನ್ನು ಗಾಳಿಯಲ್ಲಿ ತೇಲಿ ಬಿಟ್ಟಿದ್ದಾರೆ, ತೇಲಿ ಬಿಟ್ಟ 13 ಸುಳ್ಳುಗಳನ್ನು ವಶಕ್ಕೆ ಪಡೆದು ಅದಕ್ಕೆ ಉತ್ತರ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಬಿಜೆಪಿಗರಿಗೂ ಉತ್ತರ ಕೊಡುತ್ತೇವೆ ಬನ್ನಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕಬಕದಲ್ಲಿ‌ ವಿಟ್ಲ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಬಿಜೆಪಿಯವರ ಸುಳ್ಳುಗಳಿಗೆ ಉತ್ತರ ಜನ ಜಾಗೃತಿ ಸಭೆಯಲ್ಲಿ‌ಮಾತನಾಡಿದರು.

ಬಿಜೆಪಿ ಬಡವರ ವಿರೋಧಿಯಾಗಿದೆ, ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಜನೋಪಯೋಗಿ ಕಾರ್ಯಕ್ರಮ ಮಾಡಿಲ್ಲ,ಕೇಂದ್ರದಲ್ಲಿ ಬಿಜೆಪಿ‌ಅಧಿಕಾರದಲ್ಲಿದೆ ,ಕೇಂದ್ರ ಸರಕಾರ ಬಡವರ ಪರ ಏನು ಯೋಜನೆ ತಂದಿದೆ ಎಂದು ಪ್ರಶ್ನಿಸಿದ ಶಾಸಕರು ಬಿಜೆಪಿ ಅಂಬಾನಿ, ಅದಾನಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇಲ್ಲಿನ ಕೃಷಿಕರಿಗೆ ಕೇಂದ್ರದ ಮೋದಿ ಸರಕಾರ ವರ್ಷಕ್ಕೆ ಎರಡು ಬಾರಿ ಕೊಡುತ್ತಿದ್ದ ಎರಡು ಸಾವಿರ ಕಿಸಾನ್ ಸಮ್ಮಾನ್ ಯೋಜನೆಯನ್ನು ಸದ್ದಿಲ್ಲದೆ ರದ್ದು ಮಾಡಿದ್ದಾರಡ. ಆ ಹಣ ಬರುತ್ತಿರುವಾಗ ಏನು ಪ್ರಚಾರ ಮಾಡುತ್ತಿದ್ದರು, ಏನು ಬೊಬ್ಬೆ ಹೊಡೆಯುತ್ತಿದ್ದರು ಈಗ ಯಾಕೆ ನಿಲ್ಲಿಸಿದ್ದು ಎಂದು ಜನರಿಗೆ ಬಿಜೆಪಿ ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.
ಸುಳ್ಳು‌ಭಾಷಣ ಮಾಡಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅದರ ಮೂಲಕ ರಾಜಕೀಯ ಲಾಭ ಪಡೆಯುತ್ತಿದ್ದ ಬಿಜೆಪಿಯವರು ಈಗ ಯಾಕೆ ಬಾಲ ಬಿಚ್ಚುತ್ತಿಲ್ಲ. ಬಾಲ ಬಿಚ್ಚುವ ಧೈರ್ಯ ಈಗ ಇಲ್ಲ .ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಸುಳ್ಳು ಭಾಷಣಕಾರರನ್ನು ಚಡ್ಡಿಯಲ್ಲಿ ನಿಲ್ಲಿಸಿ ಪೊಟೋತೆಗೆದು ಪೊಲೀಸರು ಬೆವರು ಇಳಿಸಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನು ಗಟ್ಟಿ ಮಾಡಿ ದುಷ್ಟರನ್ನು ಮೂಲೆಗೆ ಸೇರಿಸಿದ್ದೇವೆ. ಇನ್ನು ಬಾಲ‌ಬಿಚ್ಚಿದರೆ ನಮ್ಮ ಸರಕಾರ ಸುಮ್ಮನೆ ಇರುವುದಿಲ್ಲ ಎಂದು ಶಾಸಕರು ಹೇಳಿದ ಶಾಸಕರು ಕೋಮು ಪ್ರಚೋಧಕರನ್ನು ಸಾಮೂಹಿಕವಾಗಿ ಎದುರಿಸುವ ಕೆಲಸ ಸಮಾಜದಲ್ಲಿ ಆಗಬೇಕು ಎಂದು ಹೇಳಿದರು.

ನಾವು ಮಾಡಿದ್ದೇ ಸರಿ ಎಂಬ ಭಾವನೆ ಇತ್ತು;
ಬಿಜೆಪಿಯವರಿಗೆ ನಾವು ಮಾಡಿದ್ದೇ ಸರಿ, ನಾವು ಹೇಳಿದ್ದೇ ಸರಿ ಎಂಬ ಭಾವನೆ ಇತ್ತು ಅದನ್ನು ಮುರಿಯುವ ಕೆಲಸ ಜನತೆ ಮಾಡಿದ್ದಾರೆ. ಇನ್ನು ಬಾಲ‌ಮುದುಡಿಕೊಂಡು ಸುಮ್ಮನೇ ಇರುವುದು ಲೇಸು ಎಂದು‌ಶಾಸಕರು‌ಹೇಳಿದರು.


ಪಕ್ಷದ ಮುಖಂಡರಾದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ ಬೂಡಿಯಾರ್ ಪರುಷೋತ್ತಮ ರೈ, ರವೀಂದ್ರ ನೆಕ್ಕಿಲು,ವಲಯ ಅಧ್ಯಕ್ಷ ಪುರಂದರ್ ರೈ , ಚಂದ್ರಪ್ರಭಾ ಗೌಡ, ಶರೂನ್ ಸಿಕ್ವೆರಾ, ಬೋಳೋಡಿ ಚಂದ್ರಹಾಸ ರೈ, ಪೂರ್ಣೇಶ್ ಭಂಡಾರಿ, ಹಬೀಬ್ ಕಣ್ಣೂರು, ಗ್ರಾಪಂ ಸದಸ್ಯ‌ಮಹಮ್ಮದಾಲಿ,‌ಮೆಲ್ವಿನ್ ಮೊಂತೆರೋ,ಮನೋಹರ್ ರೈ ಎಂಡೆಸಾಗು, ಹೈದರ್ ಗಟ್ಟಮನೆ, ರವಿಪ್ರಸಾದ್ ಶೆಟ್ಟಿ ಬನ್ನೂರು ಮೊದಲಾದವರು ಇದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678