• Home  
  • ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ರಸ್ತೆ ಅಭಿವೃದ್ಧಿ: ಪರ್ಯಾಯ ಸಂಚಾರ ಸಲಹೆ
- DAKSHINA KANNADA - HOME - LATEST NEWS

ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ರಸ್ತೆ ಅಭಿವೃದ್ಧಿ: ಪರ್ಯಾಯ ಸಂಚಾರ ಸಲಹೆ

ಮಂಗಳೂರು: ನಗರದ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ದಿನಾಂಕ 15-02-2026 ರಿಂದ 15-06-2026 ರವರೆಗೆ 4 ತಿಂಗಳುಗಳ ಕಾಲ ನಡೆಯಲಿದೆ. ಮೇಲ್ಕಂಡ ಅಭಿವೃದ್ದಿ ಕಾಮಗಾರಿಗಳು ನಡೆಯುವ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಪಂಪುವೆಲ್ ವೃತ್ತದಿಂದ ಕಂಕನಾಡಿ ಹಳೇ ರಸ್ತೆ – ಕಂಕನಾಡಿ ಜಂಕ್ಷನ್‌ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್‌ನಿಂದ – ಪಂಪುವೆಲ್ ವೃತ್ತ ದವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ […]

Share News

ಮಂಗಳೂರು: ನಗರದ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ದಿನಾಂಕ 15-02-2026 ರಿಂದ 15-06-2026 ರವರೆಗೆ 4 ತಿಂಗಳುಗಳ ಕಾಲ ನಡೆಯಲಿದೆ.

ಮೇಲ್ಕಂಡ ಅಭಿವೃದ್ದಿ ಕಾಮಗಾರಿಗಳು ನಡೆಯುವ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಪಂಪುವೆಲ್ ವೃತ್ತದಿಂದ ಕಂಕನಾಡಿ ಹಳೇ ರಸ್ತೆ – ಕಂಕನಾಡಿ ಜಂಕ್ಷನ್‌ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್‌ನಿಂದ – ಪಂಪುವೆಲ್ ವೃತ್ತ ದವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಎಕಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಸದ್ರಿ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಲಿದ್ದು, ಸಾರ್ವಜನಿಕರು ಈ ಕೆಳಗಿನ ರಸ್ತೆಯನ್ನು ಉಪಯೋಗಿಸಬಹುದಾಗಿದೆ.

👉1. ಪಂಪ್‌ವೆಲ್ ಜಂಕ್ಷನ್ ನಿಂದ ಕರಾವಳಿ ಜಂಕ್ಷನ್‌ಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ, ಕಂಕನಾಡಿ ಹಳೇ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

👉2. ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಪರ್ಯಾಯ ರಸ್ತೆಯಾದ ಮಹಾಕಾಳಿಪಡ್ಪು, ಮಾರ್ಗನ್ಸ್ ಗೇಟ್, ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮುಖಾಂತರ ಸಂಚರಿಸುವುದು.

👉3. ಬಿ.ಸಿ ರೋಡ್ ಕಡೆಯಿಂದ ಬರುವಂತಹ ಭಾರಿ ವಾಹನಗಳು, ಇತರೆ ವಾಹನಗಳು ಮತ್ತು ಲಾಲ್‌ಬಾಗ್ ಬಸ್ಸು ನಿಲ್ದಾಣಕ್ಕೆ ತೆರಳುವ KSRTC ಬಸ್ಸುಗಳು ಪಡೀಲ್ ಜಂಕ್ಷನ್‌ನಿAದ ನಂತೂರು ಕಡೆಗೆ ಹಾಗೂ ಕೇರಳ-ಕಾಸರಗೋಡು ಕಡೆಯಿಂದ ಕರಾವಳಿ ಕಡೆಗೆ ಬರುವ ಭಾರಿ ವಾಹನಗಳು ಮತ್ತು KSRTC ಬಸ್ಸುಗಳು ಪಂಪ್‌ವೆಲ್ ಜಂಕ್ಷನ್ ನಿಂದ ನಂತೂರು ಕಡೆಗೆ ಸಂಚರಿಸುವುದು.

👉4. ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸುವುದು.

👉5. ಕಂಕನಾಡಿ ಜಂಕ್ಷನ್-ಪಂಪುವೆಲ್ ರಸ್ತೆ(ಕಂಕನಾಡಿ ಓಲ್ಡ್ ರಸ್ತೆ), ಕರಾವಳಿ-ಕಂಕನಾಡಿ ರಸ್ತೆ, ಕಂಕನಾಡಿ-ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ-ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.

ಸದರಿ ಕಾಮಗಾರಿ ಮತ್ತು ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.

Share News