ಮಂಗಳೂರು: ಕ್ರೈಸ್ತ ಭಗಿನಿಯರನ್ನು ಸುಳ್ಳು ಆರೋಪ ವಿಧಿಸಿ ಬಂಧಿಸಿದ ಘಟನೆ ಖಂಡಿಸಿ ಮಂಗಳೂರಿನಲ್ಲಿ ಕ್ಯಾಥೊಲಿಕ್ ಸಭಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಹಾಗೂ ಬಿಜೆಪಿ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಅಲ್ಪ ಸಂಖ್ಯಾತರ ಮೇಲೆ ಬಿಜೆಪಿ ಹಾಗೂ ಸಂಘ ಪರಿವಾರಗಳು ನಿರಂತರ ದೌರ್ಜನ್ಯ ನಡೆಸುತ್ತಿದ್ದು, ಇದರಿಂದಾಗಿ ನಾವು ಬೀದಿಗೆ ಇಳಿಯುವ ಪ್ರಸಂಗ ಬಂದಿದೆ. ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂಬ ಕೂಗು ಕೇಳಿ ಬಂತು.



























ಇಂದು ಛತ್ತೀಸ್‌ಗಡದಲ್ಲಿ ನಡೆದ ಘಟನೆ ನಾಳೆ ನಮ್ಮಲ್ಲೂ ನಡೆಯಬಹುದು. ಸುಳ್ಳು ಆರೋಪ ಮಾಡಿ ವಿಷದ ಬೀಜ ಬಿತ್ತುವವರನ್ನು ಮಟ್ಟ ಹಾಕಬೇಕು. ಕ್ರೈಸ್ತ ಸನ್ಯಾಸಿನಿಯರಾದ ಯರಾದ ವಂದನ ಫ್ರಾನ್ಸಿಸ್ ಮತ್ತು ಪ್ರೀತಿ ಮೇರಿ ಅವರ ಬಂಧನ ಖಂಡನೀಯ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯ ಕೊಡುಗೆ ನೀಡುತ್ತಲೇ ಇದೆ. ಕ್ರೈಸ್ತರು ಮತಾಂತರ ಮಾಡಿದ್ದೇ ದೇಶದಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಳವಾಗಬೇಕಿತ್ತು ಎಂದು ಭಾರತೀಯ ಧಾರ್ಮಿಕ ಸಂಸ್ಥೆಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ವಂ| ಡೊಮಿನಿಕ್ ವಾಸ್ ಹೇಳಿದರು.
ಛತ್ತೀಸ್‌ಗಡದಲ್ಲಿ ಕ್ರೈಸ್ತ ಸನ್ಯಾಸಿನಿಯರ ಬಂಧನ ಖಂಡಿಸಿ ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಸಭಾ ವತಿಯಿಂದ ಸೋಮವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಽಕಾರಿ ರೋಯ್ ಕ್ಯಾಸ್ತಲಿನೊ ಮಾತನಾಡಿ, ದೇಶದಲ್ಲಿ ೫೫ ಸಾವಿರ ಶಿಕ್ಷಣ ಸಂಸ್ಥೆಗಳನ್ನು ಕ್ರೈಸ್ತರು ನಡೆಸುತ್ತಿದ್ದು, ಮೂರು ಸಾವಿರಕ್ಕೂ ಅಽಕ ಆಸ್ಪತ್ರೆಗಳಲ್ಲಿ ಕ್ರೈಸ್ತರ ಸೇವೆ ಇದೆ. ಇದರಿಂದ ದೇಶದಲ್ಲಿ ಒಳ್ಳೆಯ ಶಿಕ್ಷಣ, ಆರೋಗ್ಯ ಪ್ರಾಪ್ತಿಯಾಗಿದೆ. ಆದರೂ ಬಿಜೆಪಿಗರು ಕ್ರೈಸ್ತರ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಽಕಾರಿ ವಂ| ಜೆ.ಬಿ. ಸಲ್ಡಾನ್ಹಾ, ಕೆಥೋಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ ಬಜ್ಪೆ, ಸಭಾದ ಸಾರ್ವಜನಿಕ ಸಂಪರ್ಕಾಽಕಾರಿ ರೋಲ್ಪಿ ಡಿಕೋಸ್ತಾ, ಸಿಸ್ಟರ್ಸ್ ಆಫ್ ಸೈಂಟ್ ಆನ್ಸ್ ಪ್ರೋವಿನ್ಸ್‌ನ ಸಿ| ಸೆವರಿನ್ ಮಿನೇಜಸ್, ಕೆಥೋಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿ’ಸೋಜಾ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಕಾರ್ಯದರ್ಶಿ ವಿಲ್ಮಾ ಮೊಂತೇರೊ ಮತ್ತಿತರರು ಭಾಗವಹಿಸಿದ್ದರು.
ಪ್ರತಿಭಟನೆಯುದ್ದಕ್ಕೂ ಭಿತ್ತಿ ಪತ್ರ ಪ್ರದರ್ಶನ ಹಾಗೂ ಘೋಷಣೆಗಳನ್ನು ಕೂಡಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಮಂಗಳೂರು, ಪುತ್ತೂರು, ಬಂಟ್ವಾಳ, ಮುಡಿಪು, ವಿಟ್ಲ, ಕಾಸರಗೋಡು, ಬೇಳಾ, ಮಂಜೇಶ್ವರ, ಸುಳ್ಯ, ಬೆಳ್ತಂಗಡಿ ಸೇರಿದಂತೆ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಧರ್ಮಭಗಿಣಿಯರು, ಅಪಾರ ಸಂಖ್ಯೆಯಲ್ಲಿ ಕ್ರೈಸ್ತರು ಭಾಗವಹಿಸಿದ್ದರು.