ಬೆಂಗಳೂರು: ನಾಳೆ ಬೆಳಗಾದರೆ ಹಾಲು, ವಿದ್ಯುತ್, ಟೋಲ್ ಸೇರಿದಂತೆ ಹಲವು ದರಗಳು ಏರಿಕೆಯಾಗಿ ಜನಸಾಮಾನ್ಯರ ಜೋಬಿಗೆ ಕತ್ತರಿ ಹಾಕಲಿವೆ. ಹಾಗಾದರೆ ಏನೆಲ್ಲಾ ಬದಲಾಗಲಿದೆ ನಾಳೆಯಿಂದ.
ನಾಳೆಯಿಂದ ದೇಶಾದ್ಯಂತ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಬದಲಾವಣೆಗಳು ಆಗಲಿವೆ. ಅದರ ಒಂದಷ್ಟು ಮಾಹಿತಿ ಇಲ್ಲಿದೆ.
ಏನೆಲ್ಲಾ ಬದಲಾವಣೆಯಾಗಲಿದೆ
- ಹಾಲಿನ ದರ ಪ್ರತೀ ಲೀ.ಗೆ 4 ರೂಪಾಯಿ ಹೆಚ್ಚಳ
- ವಿದ್ಯುತ್ ದರ ಹೆಚ್ಚಳ
- ಟೋಲ್ ದರ ಹೆಚ್ಚಳ
- ಎಟಿಎಂ ವಿತ್‌ಡ್ರಾಗೆ ಹೆಚ್ಚಿನ ಶುಲ್ಕ
- ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ.
ನಾಳೆಯಿಂದ ಪ್ರತೀ ಲೀ. ಹಾಲಿನ ದರಕ್ಕೆ 4 ರೂ ಹೆಚ್ಚಳವಾಗಲಿದೆ. ಇದರ ಜೊತೆಗೆ ಮೊಸರಿಗೂ ದರ ಹೆಚ್ಚಳವಾಗಲಿದೆ. ಜೊತೆಗೆ ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳವಾಗಲಿದೆ. ಇನ್ನು ಟೋಲ್ ಬಳಸುವ ವಾಹನ ಸವಾರರಿಗೆ ಟೋಲ್ ದರದ ಬಿಸಿ ತಟ್ಟಲಿದ್ದು, ಟೋಲ್ ದರ ಶೇಕಡ 5ರಷ್ಟು ಹೆಚ್ಚಳವಾಗಲಿದೆ. ನಾಳೆಯಿಂದ ಉಚಿತ ಮಿತಿ ಮೀರಿ ಹೆಚ್ಚು ಬಾರಿ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡಿದರೆ, ಪ್ರತಿ ವಿತ್ ಡ್ರಾಗೆ 2 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಸದ್ಯಕ್ಕೆ ತಿಂಗಳಲ್ಲಿ 5 ಬಾರಿ ವಿತ್ ಡ್ರಾ ಉಚಿತವಾಗಿದೆ.
ಇದರ ಜೊತೆಗೆ ನಾಳೆ ದೇಶಾದ್ಯಂತ ಗೃಹ ಬಳಕೆ ಹಾಗೂ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆಯು ಬದಲಾಗಲಿದೆ. ತೈಲ ಕಂಪನಿಗಳು ನಾಳೆ ದರ ಪರಿಷ್ಕರಿಸಲಿವೆ.