ಮಂಗಳೂರು: ಅ. 03 : ಪುತ್ತೂರಿನಲ್ಲಿ ವಿವಾಹವಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಮಗು ಜನಿಸಿದ ವಂಚಿಸಿದ ಪ್ರಕರಣದ ಆರೋಪಿ ಕೃಷ್ಣ ರಾವ್ ಡಿಎನ್‌ಎ ಹೊಂದಿಕೆಯಾಗಿರುವುದರಿಂದ ಆತ ಯುವತಿಯನ್ನು ಮದುವೆಯಾಗಬೇಕು. ಮುಂದಿನ ನ್ಯಾಯಾಲಯ ಕಲಾಪದಲ್ಲಿ ಹಾಜರಾಗಿ ಮದುವೆಯಾಗುವುದಾಗಿ ತಿಳಿಸಬೇಕು. ಇಲ್ಲವಾದಲ್ಲಿ ಆತನ ಮನೆಗೆ ಹೋಗಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.
ಶುಕ್ರವಾರ (ಅ.03) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಮಾಡಿಸುವ ಬಗ್ಗೆ ಆತನ ಹೆತ್ತವರಿಂದ ಯಾವುದೇ ಮಾತುಕತೆ ನಡೆದಿಲ್ಲ. ಮದುವೆಯೇ ಈ ಪ್ರಕರಣಕ್ಕೊಂದು ಅಂತ್ಯ. ಕುಟುಂಬಕ್ಕೆ ನ್ಯಾಯಾವೊದಗಿಸುವ ನಿಟ್ಟಿನಲ್ಲಿ ಕೆ.ಪಿ. ನಂಜುಂಡಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಡಿಎನ್‌ಎ ವರದಿ ಬಂದು ಇಷ್ಟು ದಿನವಾದರೂ ಸಮಾಜದ ಇತರ ಮುಖಂಡರು ಎಲ್ಲಿದ್ದಾರೆ? ಸ್ವಾಮೀಜಿಗಳು ಎಲ್ಲಿದ್ದಾರೆ? ಮದುವೆ ಮಾಡಿಸುವುದಾಗಿ ಹೇಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು