• Home  
  • ಇಂದು ಪೋಪ್‌ ಅಂತ್ಯಕ್ರಿಯೆ: ನೇರಪ್ರಸಾರ ಎಲ್ಲಿ; ಸಂಪೂರ್ಣ ವಿವರ ಇಲ್ಲಿದೆ…
- COMMUNITY NEWS - HOME - INETRNATIONAL - LATEST NEWS

ಇಂದು ಪೋಪ್‌ ಅಂತ್ಯಕ್ರಿಯೆ: ನೇರಪ್ರಸಾರ ಎಲ್ಲಿ; ಸಂಪೂರ್ಣ ವಿವರ ಇಲ್ಲಿದೆ…

ರೋಮ್‌: ಐದು ದಿನಗಳ ಹಿಂದೆ (ಏ. 21)ರಂದು ನಿಧನರಾಗಿದ್ದ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಇಂದು ವ್ಯಾಟಿಕನ್ ಸಿಟಿಯಲ್ಲಿ ಜರುಗಲಿದೆ.

ಪೋಪ್ ಅವರು ಬದುಕಿದ್ದಾಗ ತಮ್ಮ ಅಂತ್ಯಕ್ರಿಯೆಯನ್ನು ವ್ಯಾಟಿಕನ್ ಸಿಟಿಯ ಸೇಂಟ್ ಮರಿಯಾ ಮಗೊಯ್ರ್ ನ ಆವರಣದಲ್ಲಿ ನೆರವೇರಿಸಬೇಕು ಎಂದು ಕೋರಿದ್ದರಂತೆ.

ಹಾಗಾಗಿ, ಅಂತಿಮ ಇಚ್ಛೆಯನ್ನು ಪೂರೈಸುವ ಸಲುವಾಗಿ ಸಂತ ಮರಿಯಾ ಮಗೊಯ್ರ್ ನಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಭಾರತೀಯ ಕಾಲಮಾನ ಇಂದು (ಏ. 26ರಂದು) ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾಗುವ ಅಂತಿಮ ವಿಧಿವಿಧಾನಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ.

 

ಎಲ್ಲಿ ವೀಕ್ಷಿಸಬಹುದು

ಅಂತ್ಯಕ್ರಿಯೆಯು ರೋಮ್ ನ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ಶುರುವಾಗುತ್ತದೆ. ಅಂದರೆ, ಭಾರತೀಯ ಕಾಲಮಾನ ಏ. 26ರಂದು ಮಧ್ಯಾಹ್ನ 1.30ರ ಸುಮಾರಿಗೆ ಶುರುವಾಗುತ್ತದೆ. ಅಂತ್ಯಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗದವರಿಗೆ ಆನ್ ಲೈನ್ ಮೂಲಕ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿಬಿಎಸ್, ಸಿಎನ್ಎನ್, ಎಬಿಸಿ ಮುಂತಾದ ನ್ಯೂಸ್ ಚಾನೆಲ್ ಗಳಲ್ಲಿ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್ ನ ಯುಟ್ಯೂಬ್ ಚಾನೆಲ್, ಡಿಸ್ನಿ ಪ್ಲಸ್, ಹುಲು ಹಾಗೂ ವ್ಯಾಟಿಕನ್ ನ್ಯೂಸ್ ಚಾನೆಲ್ (ಯುಟ್ಯೂಬ್ ಚಾನೆಲ್) ನೇರವಾಗಿ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ವೀಕ್ಷಿಸಬಹುದು.

ಅಥವಾ ಈ ಕೆಳಗಿನ ಲಿಂಕ್‌ಗಳನ್ನು ಬಳಸಿ ನೇರಪ್ರಸಾರ ವೀಕ್ಷಿಸಿ

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678