ಮಂಗಳೂರು: ಸೆ.30: ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿ ಕೇಂದ್ರ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಕುಡ್ಲದ ಪಿಲಿಪರ್ಬ-2025 ಸೀಸನ್-4 ಮುಕ್ತಾಯಗೊಂಡಿದ್ದು,10 ತಂಡಗಳ ನಡುವಿನ ಜಿದ್ದಾಜಿದ್ದಿನ ಸ್ಪರ್ಧಾಕೂಟದಲ್ಲಿ ಅಂತಿಮವಾಗಿ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ಎಂ.ಎಫ್.ಸಿ) ತಂಡವು ಪ್ರತಿಷ್ಠಿತ ಪಿಲಿಪರ್ಬ- 2025 ರ ಕಿರೀಟ ಮುಡಿಗೇರಿಸಿಕೊಂಡಿತು.
ದ
್ವಿತೀಯ ಸ್ಥಾನದ ಪ್ರಶಸ್ತಿಯನ್ನು ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ ತಂಡವು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ತಂಡ ಅಲಂಕರಿಸಿದವು.
ಪಿಲಿಪರ್ಬದ ವಿಶೇಷ ಬಹುಮಾನಗಳಾದ “ಕಪ್ಪು ಪಿಲಿ” ಪ್ರಶಸ್ತಿಯನ್ನು ಟ್ಯಾಲೆಂಟ್ಸ್ ಟೈಗರ್ಸ್ ತುಳುನಾಡ್ ತಂಡ ಪಡೆದುಕೊಂಡರೆ, “ಮರಿ ಹುಲಿ” ಹಾಗೂ ಬಹುನಿರೀಕ್ಷಿತ ಪ್ರಶಸ್ತಿಯಾದ “ಪರ್ಬದ ಪಿಲಿ”ಯನ್ನು ಪ್ರಥಮ ಸ್ಥಾನ ವಿಜೇತ ತಂಡ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ಎಂ.ಎಫ್.ಸಿ) ಪಡೆದುಕೊಂಡಿತು.
ಶಿಸ್ತಿನ ತಂಡವಾಗಿ ಟೀಮ್ ಪರಶುರಾಮ್ ಹೊರ ಹೊಮ್ಮಿದರೆ, ಬಣ್ಣಗಾರಿಕೆ ಹಾಗೂ ತಾಸೆ ಹಿಮ್ಮೇಳ ವಿಭಾಗದಲ್ಲಿ ಪುರಲ್ದಪ್ಪೆನ ಮೋಕೆದ ಜೋಕುಲು ಪೊಳಲಿ ಟೈಗರ್ಸ್, ಹಾಗೂ ಮೆರವಣಿಗೆ ವಿಭಾಗದಲ್ಲಿ ಶಿವಶಕ್ತಿ ಟೈಗರ್ಸ್ ಕುಂಜತ್ತೂರು ಮಂಜೇಶ್ವರ, ಮುಡಿ ವಿಭಾಗದಲ್ಲಿ ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ ಪ್ರಶಸ್ತಿ ಪಡೆದುಕೊಂಡರೆ, ಧರಣಿ ಮಂಡಲ ಪ್ರಶಸ್ತಿಯನ್ನು ಲೆಜೆಂಡ್ಸ್ ಟೈಗರ್ಸ್ ಕುಡ್ಲ ಬಾಚಿಕೊಂಡಿತು.
ಕೊನೆಯದಾಗಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ನೀಡಿ ಗೌರವಿಸುವ ಮೂಲಕ ನಾಲ್ಕನೇ ಆವೃತ್ತಿಯ ಪಿಲಿಪರ್ಬಕ್ಕೆ ತೆರೆ ಬಿದ್ದಿತು.
ಸು ಫ್ರಮ್ ಸೋ ಖ್ಯಾತಿಯ ಜೆ.ಪಿ ತುಮಿನಾಡು, ಚಿತ್ರನಟ ರೂಪೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವಿ.ಕೆ ಫರ್ನಿಚರ್ಸ್ ನ ವಿಠ್ಠಲ್ ಕುಲಾಲ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ಶ್ರೀ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ವಿಖ್ಯಾತ್ ಶೆಟ್ಟಿ, ಅನಿಲ್ ಬೋಳೂರು, ಸಂಜಯ್ ಪೈ, ನರೇಶ್ ಪ್ರಭು ಹಾಗೂ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.