ವಿಟ್ಲ ಪೆರುವಾಯಿ, ಜೂ. 18: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೊಲ್ಲತಡ್ಕ, ಪೆರುವಾಯಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಬ್ಯಾಗ್ ಹಾಗೂ ಪಾಠೋಪಕರಣಗಳ ಉಚಿತ ವಿತರಣಾ ಸಮಾರಂಭವು ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸಚಿನ್ ಅಡ್ವಾಯಿ ಅವರು ವಹಿಸಿದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸ ಕಡೆಂಬಿಲ . ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋರಾಜ್ ರೈ, ಆಡಳಿತ ಮಂಡಳಿ ಸದಸ್ಯರಾದ ರಾಜೇಂದ್ರನಾಥ ರೈ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಜಯಂತಿ,ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ ಮತ್ತು ನಾರಾಯಣ ನಾಯ್ಕಮುಂತಾದವರು ಉಪಸ್ಥಿತರಿದ್ದರು
ಶಿಕ್ಷಕ ವೃಂದದವರು ಹಾಗೂ ಕಾರ್ಯಕ್ರಮ ಆಯೋಜಿಸಿದ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅತಿಥಿಗಳ ಸಮ್ಮುಖದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ, ಹಳೆ ವಿದ್ಯಾರ್ಥಿ ಸಂಘದ ದಾನಿಗಳಿಂದ ಸಂಗ್ರಹಗೊಂಡ ಸುಮಾರು 50,000/- ಮೌಲ್ಯದ ಪಾಠೋಪಕರಣಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ನಫೀಸ ಕಡೆಂಬಿಲ ಮುಂದಕ್ಕೆ ಶಾಲೆಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಬಗ್ಗೆ ಹಾಗೂ ಮುಲಭೂತ ಸೌಲಭ್ಯಗಳ ಬಗ್ಗೆ ಭರವಸೆ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋರಾಜ್ ರೈ, ಅಡ್ವಾಯಿ ಹಾಗೂ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ ಪ್ರತಿ ತಿಂಗಳು ಮಕ್ಕಳಿಗಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ಸಹಕಾರದಿಂದ, ವಿವಿಧ ಚಟುವಟಿಕೆಯನ್ನು ನೀಡುವ ಬಗ್ಗೆ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಯಂ ಅವರು ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇರುವುದನ್ನು ಗಮನಕ್ಕೆ ತಂದಾಗ ಅದಕ್ಕೆ ಸ್ಪಂದಿಸಿದ ಶಾಲಾ ಸಂಚಾಲಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಪಧಾದಿಕಾರಿಗಳು, ಇದೇ ವಾರದೊಳಗೆ ಎರಡು ಶಿಕ್ಷಕಿಯರನ್ನು ಗೌರವ ನೆಲೆಯಲ್ಲಿ, ಸರಕಾರದ ಮಾನದಂಡದಂತೆ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು
ಶಿಕ್ಷಕಿಯರಾದ ಶ್ರೀಮತಿ ಮಾಲತಿ ಹಾಗೂ ಶ್ರೀಮತಿ ಉಷಾ ಸಹಕರಿಸಿದರು. ಶಿಕ್ಷಕಿಯಾದ ಶ್ರೀಮತಿ ಅಶ್ವಿನಿ ಸ್ವಾಗತಿಸಿದರು. ಸುಂದರ ಜಿ ಗುತ್ತು ನಿರೂಪಿಸಿದರು.