ಪೆರುವಾಯಿ ಗ್ರಾಮ ಪಂಚಾಯತ್ ನ ಅಭಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಮತ್ತು ಪರಿವರ್ತನೆ ಕಾರ್ಯಕ್ರಮದಡಿಯಲ್ಲಿ “ಮಾದಕ ವ್ಯಸನ ವಸ್ತು ಮುಕ್ತ ಕರ್ನಾಟಕ” ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ನ ಸಂಗಮ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಬಿಸ ಇವರು ಮಾತಾಡಿ ಎಲ್ಲಾ ಮನೆಗಳಿಂದ ಒಣಕಸ ವನ್ನು ಘನತ್ಯಾಜ್ಯ ಘಟಕದ ವಾಹನಕ್ಕೆ ನೀಡುವಂತೆ ತಿಳಿಸಿದರು.
ಒಕ್ಕೂಟದ ಅಧ್ಯಕ್ಷರಾದ ಶರ್ಮಿಳಾ ಅಧ್ಯಕ್ಷೆ ವಹಿಸಿದ್ದರು.
MBK ವನಿತಾ ರವರು ವಾರ್ಷಿಕ ವರದಿ ಮತ್ತು ಜಮಾ-ಖರ್ಚು ನ್ನು ಮಂಡಿಸಿದರು. ವಲಯದ ಮೇಲ್ವಿಚಾರಕಿ ಕುಸುಮ ಒಕ್ಕೂಟದ 2025-2026ರ ಸಾಲಿನ ಕಾರ್ಯಕಾರಿ ಸಮಿತಿಯನ್ನು ಪುನಃ ರಚನೆ ಮಾಡಿದರು. ಹೊಸ ಕಾರ್ಯಕಾರಿ ಸಮಿತಿಗೆ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಹಿಂದಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಹರಿಣಾಕ್ಷಿ ಇವರು ಮಾದಕ ವ್ಯಸನದ ವಸ್ತುಗಳು ಮತ್ತು ಇದರಿಂದ ಆಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಲಲಿತಾ ಮತ್ತು ಪಂಚಾಯತ್ ನ ಸದಸ್ಯರಾದ ರಶ್ಮಿ , ಪ್ರಾಥಮಿಕ ಆರೋಗ್ಯ ಕೇಂದ್ರದ CHO ಮಧು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸಂಘ, ಸ್ತ್ರೀ ಶಕ್ತಿಸಂಘ ಮತ್ತು ನವೋದಯ ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸಾಲ ಮರುಪಾವತಿ ಮತ್ತು ಸಂಘ ಚಟುವಟಿಕೆಗಳನ್ನು ಆಧಾರಿಸಿ ಮೂರು ಉತ್ತಮ ಗುಂಪುಗಳನ್ನಾಗಿ ಆಯ್ಕೆ ಮಾಡಲಾಗಿದ್ದು ಆಯ್ಕೆಯಾದ ಗುಂಪುಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಮೀನಾಕ್ಷಿ ಪ್ರಾರ್ಥಿಸಿದರು. ಘನತ್ಯಾಜ್ಯ ಘಟಕದ ದ ವಾಹನ ಚಾಲಕಿ ಅನಿತಾ ಸ್ವಾಗತಿಸಿದರು. LCRP ನೌಶಿನ ವಂದಿಸಿದರು. ಕೃಷಿ ಸಖಿ ಸವಿತಾ ಡಿ ಸೋಜಾ ನಿರೂಪಿಸಿದರು.