canaratvnews

ಕ್ರೈಸ್ತ ಶಿಕ್ಷಣ ವರ್ಷ ಪ್ರಾರಂಭೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಜೂ. 6: ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಪೆರುವಾಯಿಫಾತಿಮಾ ಮಾತೆಯ ದೇವಾಲಯದಲ್ಲಿ 2025 – 26 ನೇ ಸಾಲಿನ ಕ್ರೈಸ್ತ ಶಿಕ್ಷಣ ವರ್ಷ ಪ್ರಾರಂಭೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ವಿಶ್ವಾಸ ನಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂಬ ಧ್ಯೇಯ ವಾಕ್ಯದೊಂದಿಗೆ ಕ್ರೈಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು, ಹೆತ್ತವರು, ಉಪಾಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಶಿಕ್ಷಣದ ವರ್ಷವನ್ನು ಉದ್ಘಾಟಿಸಲಾಯಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿವಂಗತ ಹೆನ್ರಿ ಡಿಸೋಜ ಇವರ ಸ್ಮರಣಾರ್ಥವಾಗಿ 2024 – 25 ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ಅತೀ ಉತ್ತಮ ಅಂಕ ಗಳಿಸಿದ ಶೈನ ಲೀಶ ಮೊಂತೇರೊ ಇವರಿಗೆ ಸನ್ಮಾನಿಸಲಾಯಿತು ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಮಲ್ಲಿಗೆ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ‘ರೈತ ರತ್ನ’ ಪ್ರಶಸ್ತಿ ಪುರಸ್ಕೃತರಾದ ಅನಿತ ಡಿಸೋಜ ಮುಳಿಯ ಇವರಿಗೆ ಸನ್ಮಾನಿಸಲಾಯಿತು.

ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಫಾ. ಸೈಮನ್ ಡಿಸೋಜ, ಕ್ರೀಸ್ತಿನ್ ಡಿಸೋಜ, ಕಡೆಂಗೋಡ್ಲು, ಡೆನಿಸ್ ಮೊಂತೆರೊ, ವೈಲೆಟ್ ಕುವೆಲ್ಲೊ, ರಾಲ್ಫ್ ಡಿಸೋಜ ಉಪಸ್ಥಿತರಿದ್ದರು. ರಾಜೇಶ್ ಫೆರಾವೊ ಕಾರ್ಯಕ್ರಮ ನಿರೂಪಿಸಿದರು.

Share News
Exit mobile version