• Home  
  • ಜುಲೈ15ರೊಳಗೆ ದಂಡ ಕಟ್ಟಿ, ಇಲ್ಲದಿದ್ದರೆ ಕೋರ್ಟ್‌ಗೆ ಚಾರ್ಜ್‌ಶೀಟ್‌
- DAKSHINA KANNADA

ಜುಲೈ15ರೊಳಗೆ ದಂಡ ಕಟ್ಟಿ, ಇಲ್ಲದಿದ್ದರೆ ಕೋರ್ಟ್‌ಗೆ ಚಾರ್ಜ್‌ಶೀಟ್‌

ಮಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವಂತಹ ವಾಹನಗಳ ಮೇಲೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತೆಗೆದಿರುವ ಭಾವಚಿತ್ರಗಳನ್ನು ಮತ್ತು ಟ್ರಾಫಿಕ್ ಕಂಟ್ರೋಲ್ & ಕಮಾಂಡ್ ಸೆಂಟರ್‌ನಲ್ಲಿ ಸಿಸಿಟಿವಿ ಯಲ್ಲಿ ಸೆರೆಯಾಗಿರುವ ವಾಹನ ಚಾಲಕ/ಸವಾರರ ಸಂಚಾರ ನಿಯಮ ಉಲ್ಲಂಘನೆಯ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ.   

ವಾಹನ ಚಾಲಕರು/ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಅಂಚೆ ಮೂಲಕ ನೋಟಿಸುಗಳನ್ನು ನೋಂದಣಿ ಸಂಖ್ಯೆಯ ಮಾಲಕರಿಗೆ ಈಗಾಗಲೇ ಕಳುಹಿಸಲಾಗಿದ್ದು, ದಂಡವನ್ನು ಕಟ್ಟದೇ ಹಲವಾರು ಪ್ರಕರಣಗಳು ಬಾಕಿ ಇರುತ್ತದೆ.

ಸಂಚಾರ ನಿಯಮ ಉಲ್ಲಂಘನೆಯ ಕುರಿತು ದಂಡ ಪಾವತಿಸದೇ ಇರುವವರ ವಿರುದ್ದ ಕಾನೂನು ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದು, ಪ್ರಥಮ ಹಂತವಾಗಿ ದಂಡ ಪಾವತಿ ಮಾಡಲು ವಾಹನ ನೋಂದಣಿ ಮಾಲಿಕರಿಗೆ ನೋಟಿಸ್ ಈಗಾಗಲೇ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗಿದ್ದು,  ಜುಲೈ 15ರ ಒಳಗಾಗಿ ದಂಡ ಪಾವತಿಸಲು ವಿಫಲರಾದ್ದಲ್ಲಿ, ಸಂಚಾರ ನಿಯಮ ಉಲ್ಲಂಘನೆಯ ಕುರಿತು ನೋಂದಣಿ ಮಾಲಕರ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುವುದು. ನಂತರ ನ್ಯಾಯಾಲಯದಿಂದ ಹೊರಡಿಸುವ ಸಮನ್ಸ್/ವಾರಂಟು ಪ್ರಕ್ರಿಯೆಗಳು ಮುಂದುವರೆಯುತ್ತದೆ.
ಆದುದ್ದರಿಂದ ನೋಟಿಸ್ ಸ್ವೀಕೃತಿಯಾಗಿರುವ ವಾಹನದ ನೋಂದಣಿ ಮಾಲಕರು ದಂಡವನ್ನು ಪಾವತಿ ಮಾಡಿ, ಮುಂದೆ ಆಗುವ ಪರಿಣಾಮಗಳಿಗೆ ಅವಕಾಶವನ್ನು ನೀಡದಂತೆ ಕೋರಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಅದರಂತೆ ನಿಮ್ಮ ವಾಹನವು ಮಂಗಳೂರು ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದೆಯೇ ಎಂದು ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅನುಸರಿಸ ಬೇಕಾದ ವಿಧಾನಗಳು:
ಈ ಕೆಳಕಂಡ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಥವಾ ದೂರವಾಣಿ ಕರೆ ಮಾಡಿ ವಿಚಾರಿಸಲು, ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.


Traffic East Police Station
Kadri, Mangaluru
0824-2220523

Traffic West Police Station
Pandeshwara,  Mangaluru
0824-2220524

Traffic North  Police Station
Baikampady, Mangaluru                                                  
0824-2220833

Traffic South  Police Station
Jeppinamogeru, Mangaluru
0824-2220850

ACP Traffic Office
Pandeshwar, Mangaluru
0824-2220823

*ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸ್ ಅಧಿಕಾರಿ (ASI to PI) ಗಳಲ್ಲಿ ಇರುವ ಡಿವೈಸ್‌ಗಳಲ್ಲಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.

*ಕರ್ನಾಟಕ ರಾಜ್ಯದಲ್ಲಿರುವ ಯಾವುದೇ ಅಂಚೆ ಕಛೇರಿಯಲ್ಲಿ ವಿಚಾರಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.

*ತಮ್ಮ ಸಮೀಪದ ಯಾವುದೇ ಕರ್ನಾಟಕ-ವನ್ (Karnataka One) ಕೇಂದ್ರಕ್ಕೆ ಭೇಟಿ ನೀಡಿ ದಂಡ ಪಾವತಿ ಮಾಡಬಹುದಾಗಿರುತ್ತದೆ.

*Online payment ಸೇವೆಯಾದ karnataka one:- https://www.karnatakaone.gov.in/PoliceCollectionOfFine/PoliceCollectionOfFine/dGVtYitUZkgvWitkcG1iV0RJamJWZz09 ವೆಬ್ ಸೈಟ್ / ಅಪ್ ಮೂಲಕ ಲಾಗಿನ್ ಆಗಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678